ಭಾಗ್ಯಲಕ್ಷೀ ಯೋಜನೆಯ ಮೊತ್ತ ಪಡೆಯಲು ಅರ್ಜಿ ಆಹ್ವಾನ
ಹೊಸಪೇಟೆ, 28 ಜುಲೈ (ಹಿ.ಸ.) : ಆ್ಯಂಕರ್ : ಹಗರಿಬೊಮ್ಮನಹಳ್ಳಿಯ 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಕ್ಲೇಮ್ ಪಡೆಯದ ನೋಂದಾಯಿತ ಬಾಕಿ ಫಲಾನುಭವಿಗಳು ಮತ್ತು 2007-08ನೇ ಸಾಲಿನಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಮೊತ್ತ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಭಾಗ್
ಭಾಗ್ಯಲಕ್ಷೀ ಯೋಜನೆಯ ಮೊತ್ತ ಪಡೆಯಲು ಅರ್ಜಿ ಆಹ್ವಾನ


ಹೊಸಪೇಟೆ, 28 ಜುಲೈ (ಹಿ.ಸ.) :

ಆ್ಯಂಕರ್ : ಹಗರಿಬೊಮ್ಮನಹಳ್ಳಿಯ 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ಕ್ಲೇಮ್ ಪಡೆಯದ ನೋಂದಾಯಿತ ಬಾಕಿ ಫಲಾನುಭವಿಗಳು ಮತ್ತು 2007-08ನೇ ಸಾಲಿನಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಮೊತ್ತ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಭಾಗ್ಯಲಕ್ಷ್ಮೀ ಯೋಜನೆಯಡಿ 2006-07 ನೋಂದಾಯಿತ ಫಲಾನುಭವಿಗಳಲ್ಲಿ 50 ಫಲಾನುಭವಿಗಳು ಈವರೆಗೂ ಕ್ಲೇಮು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಿರುವುದಿಲ್ಲ. ಸರ್ಕಾರದ ಯೋಜನೆಯ ಸೌಲಭ್ಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪ ಬೇಕಾಗಿರುವುದರಿಂದ ಭಾಗ್ಯಲಕ್ಷ್ಮೀ ಯೋಜನೆಯಡಿ ಕ್ಲೇಮ್ ಪಡೆಯದ ಮತ್ತು 2007-08ನೇ ಸಾಲಿನಲ್ಲಿ ನೊಂದಾಯಿತ 18 ವರ್ಷ ತುಂಬಿದ ಮತ್ತು ಇತರ ಅರ್ಹತೆ ಷರತ್ತುಗಳನ್ನು ಪೂರೈಸಿದ ಫಲಾನುಭವಿಗಳು ಕೂಡಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಗರಿಬೊಮ್ಮನಹಳ್ಳಿ ಕಚೇರಿಗೆ ಭೇಟಿ ನೀಡಿ ಅರ್ಹ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ.

ಕ್ಲೇಮು ಪಡೆಯಲು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ಈ ವಿಷಯದಲ್ಲಿ ಯಾವುದೇ ಮಧ್ಯವರ್ತಿಗಳು ಹಣ ಕೇಳಿದಲ್ಲಿ ನೀಡಬಾರದು ಹಾಗೂ ಒಂದು ವೇಳೆ ಈ ರೀತಿ ಯಾರೇ ಹಣ ಕೇಳಿದಲ್ಲಿ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ನೀಡಬೇಕೆಂದು ಹಗರಿಬೊಮ್ಮನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande