ಹುಬ್ಬಳ್ಳಿ, 27 ಜುಲೈ (ಹಿ.ಸ.) :
ಆ್ಯಂಕರ್ : ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದಿಂದ ಮಾತ್ರ ನಾಡಿನ ಹಾಗೂ ಸಮಾಜಗಳ ಅಭಿವೃದ್ಧಿ ಸಾಧ್ಯವಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ಹುಬ್ಬಳ್ಳಿಯಲ್ಲಿ ಕರ್ನಾಟಕ ಸೂಫಿ ಸಂತರ ಸೌಹಾರ್ದ ವೇದಿಕೆ ಆಯೋಜಿಸಿದ್ದ ಸೂಫಿ ಹಾಗೂ ಸಂತರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿರಹಟ್ಟಿಯ ಫಕೀರೇಶ್ವರ ಮಠ, ಹುಬ್ಬಳ್ಳಿಯ ಫತೇಶಾವಲಿ ದರ್ಗಾ, ಸಿದ್ಧಾರೂಢ ಮಠ ಭಾವೈಕ್ಯತೆಗೂ, ಶಾಂತಿಗೂ ಪ್ರತೀಕವಾಗಿದೆ. ಸೂಫಿ ಸಂತರ ಸರಳ ತತ್ತ್ವಗಳು ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶರೀಪ್ ಪೀರ್-ಏ-ತರೀಖತ್ವ ಹಾಪೀಜ್ ಸೈಯದ್ ಅಲಿ ಹುಸೇನ್, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಸಂಸದ ನಾಸೀರ್ ಹುಸೇನ್, ಸಚಿವರುಗಳು ಸತೀಶ್ ಜಾರಕಿಹೂಳಿ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa