ದಾವಣಗೆರೆ, 27 ಜುಲೈ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ-2 ದಾವಣಗೆರೆ ನಗರ ಹೆಚ್.ಐ.ಸಿ-1919 ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ದಾವಣಗೆರೆ ನಗರ ಹೆಚ್.ಐ.ಸಿ-2614, ಈ ಎರಡು ವಿದ್ಯಾರ್ಥಿ ನಿಲಯಗಳನ್ನು ನಡೆಸಲು ಕನಿಷ್ಠ 900 ಚದರ ಮೀಟರ್ ವಿಸ್ತಿರ್ಣವುಳ್ಳ ಸುಸಜ್ಜಿತವಾದ ಬಾಡಿಗೆ ಕಟ್ಟಡ ಅವಶ್ಯಕತೆ ಇರುತ್ತದೆ.
ಕಟ್ಟಡ ಅಗತ್ಯ ಮೂಲಭೂತ ಸೌಲಭ್ಯವಿರುವ ಕಟ್ಟಡದ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 7 ರೊಳಗಾಗಿ ಅಂಚೆ ಮೂಲಕ, ಖುದ್ದಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿ.ಮಲ್ಲಿಕಾರ್ಜುನಪ್ಪ ದ್ವಿಪಥ ರಸ್ತೆ, ಶ್ರೀಮತಿ ರತ್ನಮ್ಮ ತೆಲಗಿ ಸಿದ್ದೇಶಿ ರೆಸಿಡೆನ್ಸಿಯಲ್ ಲೇ ಔಟ್ ಶ್ರೀದೇವರಾಜ ಅರಸು ಭವನ, ದಾವಣಗೆರೆ ಇಲ್ಲಿಗೆ ಸಂಪರ್ಕಿಸಲು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa