ಮನ್ ಕೀ ಬಾತ್ ಭರವಸೆಯ‌ ಆಶಾಕಿರಣ : ರಾಮುಲು
ಬಳ್ಳಾರಿ, 27 ಜುಲೈ (ಹಿ.ಸ.) : ಆ್ಯಂಕರ್ : ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವರ ಬಾನುಲಿ ಪ್ರಸಾರ ಕಾರ್ಯಕ್ರಮ ಮನ್ ಕೀ ಬಾತ್‍ನ್ನು ಪಕ್ಷದ ಪ್ರಮುಖರು ಹಾಗೂ ಮತ್ತಿತರರ ಜೊತೆ ಆಲಿಸಿದರು. ನಂತರ ಮಾತನಾಡಿದ ಅವರು, ಮನ್ ಕೀ ಬಾತ್‍ನಲ್ಲಿ ಪ್ರಧಾನಿ
Ramul


ಬಳ್ಳಾರಿ, 27 ಜುಲೈ (ಹಿ.ಸ.) :

ಆ್ಯಂಕರ್ : ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅವರ ಬಾನುಲಿ ಪ್ರಸಾರ ಕಾರ್ಯಕ್ರಮ ಮನ್ ಕೀ ಬಾತ್‍ನ್ನು ಪಕ್ಷದ ಪ್ರಮುಖರು ಹಾಗೂ ಮತ್ತಿತರರ ಜೊತೆ ಆಲಿಸಿದರು.

ನಂತರ ಮಾತನಾಡಿದ ಅವರು, ಮನ್ ಕೀ ಬಾತ್‍ನಲ್ಲಿ ಪ್ರಧಾನಿಯವರು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಕುರಿತು ನೀಡಿದ ಸಲಹೆ, ಯುನೆಸ್ಕೊ 12 ಮರಾಠ ಕೋಟೆಗಳನ್ನು ವಿಶ್ವ ಪರಂಪರೆಯ ತಾಣ ಎಂದು ಗುರುತಿಸಿದ್ದು, ತಂತ್ರಜ್ಞಾನದ ಮೂಲಕ ಮಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಬೆಳಕು ಚೆಲ್ಲಿದ್ದು, ದೇಶದ ಜನರಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡಿಸಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande