ಬುಡಕಟ್ಟು ಗ್ರಾಮಗಳಲ್ಲಿ ಹೋಂಸ್ಟೇ ಆರಂಭಿಸಲು ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ
ಹೊಸಪೇಟೆ, 26 ಜುಲೈ (ಹಿ.ಸ.) : ಆ್ಯಂಕರ್ : ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಅಭಾ ಜನಜಾತೀಯ ಗ್ರಾಮ್ ಉತ್ಕರ್ಷ್ ಅಭಿಯಾನ (ಡಿಎ-ಜೆಜಿಯುಎ) ಯೋಜನೆಯಡಿ ಗುರುತಿಸಿರುವ ಬುಡಕಟ್ಟು ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ಸ್ಥಾಪಿ
ಬುಡಕಟ್ಟು ಗ್ರಾಮಗಳಲ್ಲಿ ಹೋಂಸ್ಟೇ ಆರಂಭಿಸಲು ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ


ಹೊಸಪೇಟೆ, 26 ಜುಲೈ (ಹಿ.ಸ.) :

ಆ್ಯಂಕರ್ : ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಅಭಾ ಜನಜಾತೀಯ ಗ್ರಾಮ್ ಉತ್ಕರ್ಷ್ ಅಭಿಯಾನ (ಡಿಎ-ಜೆಜಿಯುಎ) ಯೋಜನೆಯಡಿ ಗುರುತಿಸಿರುವ ಬುಡಕಟ್ಟು ಗ್ರಾಮಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ಸ್ಥಾಪಿಸಲು 5 ಲಕ್ಷರೂ.ಗಳು ಹಾಗೂ ಹೋಂಸ್ಟೇ ನವೀಕರಿಸಲು 3 ಲಕ್ಷರೂ.ಗಳು ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಫ್ರಭುಲಿಂಗಪ್ಪ ತಳಕೇರಿ ಅವರು ತಿಳಿಸಿದ್ದಾರೆ.

ಫಲಾನುಭವಿಗಳ ಅರ್ಹತೆ : ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಕಾರ್ಯಕ್ರಮದ ಅಡಿ ಆಯ್ಕೆಯಾದ ಗ್ರಾಮದ ಅಥವಾ ಅಕ್ಕಪಕ್ಕದ ಗ್ರಾಮದ ನಿವಾಸಿಯಾಗಿರಬೇಕು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು : ಜಾತಿ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮನೆ, ನಿವೇಶನದ ದಾಖಲೆ, ಮನೆಯ ಫೋಟೋ, ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಎನ್‌ಓಸಿ ಮತ್ತು ವಾಸಸ್ಥಳ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.

ಈ ಯೋಜನೆಗ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಮಲಾಪುರ ಲೋಟಸ್ ಮಹಲ್ ಹತ್ತಿರ, ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಜು.29 ರೊಳಗಾಗಿ ಅರ್ಜಿಗಳನ್ನು ಪಡೆದುಕೊಂಡು ನಿಗಧಿತ ಅರ್ಜಿ ನಮೂನೆ ಭರ್ತಿ ಮಾಡಿ ಕಚೇರಿಯಲ್ಲಿ ದ್ವೀಪ್ರತಿಯಲ್ಲಿ ಸಲ್ಲಿಸಬೇಕು.

ಅಭಿಯಾನದಡಿ ಆಯ್ಕೆಯಾದ ಗ್ರಾಮಗಳು : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ, ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ, ಹೊಸೂರು, ನರಸಾಪುರ, ಕೂಡ್ಲಿಗಿ ತಾಲೂಕಿನ ಅಡವಿ ಸೂರವ್ವನಹಳ್ಳಿ, ಜರ್ಮಲಿ, ಸಿಡಿಗಲ್ಲು, ನರಸಿಂಹಗಿರಿ, ಹುಲಿಕುಂಟೆ, ರ‍್ರಲಿಂಗನಹಳ್ಳಿ, ಜೆ.ಬಿ.ಹಳ್ಳಿ, ಹರುಡಿಹಳ್ಳಿ, ಹುರುಳಿಹಾಳ್, ಚಿತ್ರತಗುಂಡು, ಮೀನಕೇರಿ, ಕುಮತಿ, ಹಾಲಯ್ಯನಕೋಟೆ, ಸೂಲದಹಳ್ಳಿ, ಜುಮ್ಮೋಬನಹಳ್ಳಿ, ತಿಪ್ಪೇಹಳ್ಳಿ, ಕೊಟ್ಟೂರು ತಾಲೂಕಿನಲ್ಲಿ ನಾಗೇನಹಳ್ಳಿ.

ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಲೋಟಸ್ ಮಹಲ್ ಹತ್ತಿರ, ಕಮಲಾಪುರ ಕಚೇರಿ ದೂ.08394-295640 ಸಂಖ್ಯೆಗೆ ಕಚೇರಿ ವೇಳೆಯಲ್ಲಿ ವೇಳೆಯಲ್ಲಿ ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande