ಬಾಲ್ದೋಟ ವಿರುದ್ಧ ಧರಣಿ : ಒಂಬತ್ತು ಮಂದಿ ವಿರುದ್ಧ ದೂರು
ಕೊಪ್ಪಳ, 25 ಜುಲೈ (ಹಿ.ಸ.) : ಆ್ಯಂಕರ್ : ಬಾಲ್ದೋಟ ಕಾರ್ಖಾನೆ ವಿರುದ್ಧ ಧರಣಿ ನಡೆಸಿದ್ದ ಹೋರಾಟಗಾರರ ಪೈಕಿ ಒಂಬತ್ತು ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸರು ಪ್ರತಿಭಟನೆ ನಡೆಸಿದ ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ
ಕೊಪ್ಪಳ : ಬಾಲ್ದೋಟ ವಿರುದ್ಧ ಧರಣಿ: ಒಂಭತ್ತು ಮಂದಿಯ ವಿರುದ್ಧ ದೂರು ದಾಖಲು


ಕೊಪ್ಪಳ, 25 ಜುಲೈ (ಹಿ.ಸ.) :

ಆ್ಯಂಕರ್ : ಬಾಲ್ದೋಟ ಕಾರ್ಖಾನೆ ವಿರುದ್ಧ ಧರಣಿ ನಡೆಸಿದ್ದ ಹೋರಾಟಗಾರರ ಪೈಕಿ ಒಂಬತ್ತು ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ ಗ್ರಾಮೀಣ ಪೊಲೀಸರು ಪ್ರತಿಭಟನೆ ನಡೆಸಿದ ಅಲ್ಲಮ ಪ್ರಭು ಬೆಟದೂರು, ಹನುಮಂತಪ್ಪ ಕಲ್ಕೆರಿ, ಮಂಗಳೇಶ್ ರಾಥೋಡ್, ಮುದುಕಪ್ಪ ಹೊಸಮನಿ, ಕೆ.ಬಿ. ಗೋನಾಳ್, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಕೇರಿ ಹಾಗೂ ಎ. ಗಫಾರ್ ಅವರ ವಿರುದ್ಧ ಪ್ರಕರಣ ದಾಖಲಿದ್ದಾರೆ.

ಹಿನ್ನಲೆ : ದನಕರುಗಳಿಗೆ ನೀರು ಕುಡಿಯಲು ಕಾರ್ಖಾನೆ ಆವರಣದಲ್ಲಿರುವ ಬಸಾಪುರ ಕೆರೆಯನ್ನು ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಜಿಲ್ಲಾಡಳಿತ ಭವನ ಮತ್ತು ಬಾಲ್ದೋಟ ಕಾರ್ಖಾನೆಯ ಮುಂದೆ ಬುಧವಾರ ಧರಣಿ ನಡೆಸಿ, ಜಾನವಾರುಗಳನ್ನು ಬಿಟ್ಟಿತ್ತು.

ಈ ಸಂದರ್ಭದಲ್ಲಿ ಬಲ್ಡೋಟ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರ ನಡುವೆ ವಾಗ್ವಾದ ನಡೆದಿತ್ತು. ಧರಣಿ ನಡೆಸಿದವರು ಬಿ.ಎಸ್.ಪಿ.ಎಲ್. ಬಾಲ್ದೋಟ ಕಂಪೆನಿಯ ಮುಖ್ಯ ದ್ವಾರದ ಮೂಲಕ 1000ಕ್ಕೂ ಹೆಚ್ಚು ದನಕರುಗಳನ್ನು – ಜಾನುವಾರುಗಳನ್ನು ಒಳಗಡೆ ಬಿಟ್ಟು, ಕಂಪನಿಯ ದಿನನಿತ್ಯದ ಕೆಲಸಗಳಿಗೆ ಅಡ್ಡಿ ಮಾಡಿದ್ದಾರೆ. ಈ ವೇಳೆ ನಾನು ಸೇರಿದಂತೆ ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಬಸವರಾಜ ಬ್ಯಾಳಿ, ಬಸವರಾಜ ಪಟ್ಟಣಶೆಟ್ಟಿ, ನಾಗರಾಜ ಬೋಸಗಿ ಚಂದ್ರಶೇಖರ ಇಂಜಗಿನಿರಿ, ಮಂಜುನಾಥ ಬಾರಿಕೇರ ಇತರರು ಸೇರಿ ಜನ ಮತ್ತು ಜಾನುವಾರುಗಳನ್ನು ತಡೆಯಲು ಯತ್ನಿಸಿದೆವು. ಆದರೆ ಪ್ರತಿಭಟನಾನಿರತರು ನಮ್ಮೆಲ್ಲರನ್ನು ತಳ್ಳಿಕೊಂಡು ಜನ-ಜಾನುವಾರುಗಳು ಸಮೇತ ಬಲವಂತವಾಗಿ ನಮ್ಮ ಕಂಪನಿ ಅನಧಿಕೃತವಾಗಿ – ಅಕ್ರಮವಾಗಿ ಪ್ರವೇಶಿಸಿ, ತೊಂದರೆ ನೀಡಿದ್ದಾರೆ. ಪ್ರತಿಭಟನೆ ನಡೆಸಿದವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸೆಕ್ಯುರಿಟಿ ಮ್ಯಾನೇಜರ್ ಎಂ. ಮಹೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande