ಬಳ್ಳಾರಿ, 25 ಜುಲೈ (ಹಿ.ಸ.) :
ಆ್ಯಂಕರ್ : ಪವಾಡಗಳ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ 19ನೇ ವರ್ಷದ ಶ್ರಾವಣ ಮಾಸದ 2 ನೇ ಸೋಮವಾರ ಆಗಸ್ಟ್ 4 ರಂದು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಗುರು ಅಜ್ಜಯ್ಯ ಹಾಗೂ ಹೇಮಜ್ಜಯ್ಯ ಸೇವಾ ಸಮಿತಿ (ರಿ) ಹೊನ್ನಳ್ಳಿ ತಾಂಡ ಇವರು ಅಜ್ಜಯ್ಯನ ಶಿಷ್ಯರಾದ ಶ್ರೀ ಹೇಮಜ್ಜಯ್ಯ ಸಂಕಲ್ಪದಂತೆ ಅಂದು ಅಜ್ಜಯ್ಯನ ಸನ್ನಿಧಾನದಲ್ಲಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಇದಕ್ಕೂ ಮುನ್ನಾ ಆ.3ರ ಭಾನುವಾರದಂದು ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭವಾಗಲಿದ್ದು ಶ್ರೀ ರುಕ್ಕಿಣಿ ಪಾಂಡುರಂಗ ದೇವಸ್ಥಾನ ಭಜನಾ ಮಂಡಳಿ ಗುಗ್ಗರಹಟ್ಟ ಇವರ ನಡೆಸಿಕೊಡಲಿದ್ದಾರೆ. ಆ.4ರ ಸೋಮವಾರ ಲೋಕ ಕಲ್ಯಾಣಾರ್ಥಕ್ಕಾಗಿ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತ 4 ಗಂಟೆಗೆ ಗುಗ್ಗರಹಟ್ಟಿಯ ಶಿವನ ದೇವಸ್ಥಾನದ ನಾಗರಾಜಸ್ವಾಮಿ ಮತ್ತು ತಂಡದವರು ಮಹಾ ಗಣಪತಿ ಹೋಮ, ಶಾಂತಿ ಹೋಮ, ನವಗ್ರಹ ಪೂಜೆ, ಮಹಾ ರುದ್ರಾಭಿಷೇಕ ನಡೆಸಲಿದ್ದಾರೆ. ಬೆಳಿಗ್ಗೆ 8-00 ರಿಂದ ಗಂಗೆ ಪೂಜೆ, ಡೊಳ್ಳುಕುಣಿತ, ಲಂಬಾಣಿ ನೃತ್ಯ ಹಾಗೂ ಮಹಾ ಮಂಗಳಾರತಿ, ತದನಂತರ ಅನ್ನ ಪ್ರಸಾದವಿರುತ್ತದೆ.
ಬಳ್ಳಾರಿಯ ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಶ್ರೀ ಕಲ್ಯಾಣಸ್ವಾಮಿಗಳು, ಸಂಡೂರು ತಾಲೂಕಿನ ಸುಶೀಲಾನಗರದ ಶ್ರೀ ಸೇವಾಲಾಲ್ ಶಿವಶಕ್ತಿ ಬಂಜಾರ ಗುರುಪೀಠದ ಪೂಜ್ಯ ತಿಪ್ಪೇಸ್ವಾಮಿ ಮಹಾರಾಜರು, ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ದೂಪದಹಳ್ಳಿ ಬಂಜಾರ ಶಕ್ತಿಪೀಠದ ಪರಮ ಪೂಜ್ಯ ಶ್ರೀ ಶಿವಪ್ರಕಾಶ್ ಮಹಾರಾಜ್ ಸ್ವಾಮೀಜಿಗಳು ಮತ್ತು ಆನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರು ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕಾಂಗ್ರೆಸ್ ಪಕ್ಷದ ಧುರೀಣರಾದ ಬಿ. ವೆಂಕಟೇಶ್ ಪ್ರಸಾದ್, ಉದ್ಯಮಿಗಳಾದ ಟಿ.ಜಿ. ಎರಿಸ್ವಾಮಿ, ಕಾಂಗ್ರೇಸ್ ಮುಖಂಡರಾದ ಎಸ್. ವೆಂಕಟರಾವ್, ಮೀನುಗಾರರ ಘಟಕದ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂಪ ಚವಣ್, ಕರ್ನಾಟಕ ಸ್ಪಾಂಜ್ & ಐರನ್ ಅಸೋಸಿಯೇಷನ್ ಗೌರವಾಧ್ಯಕ್ಷ ಟಿ.ಶ್ರೀನಿವಾಸರಾವ್, ಹಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೊನ್ನೂರಮ್ಮ, ಪಿಡಿಓ ಪ್ರಭಾಕರ್, ಗ್ರಾ.ಪಂ.ಉಪಾಧ್ಯಕ್ಷೆ ಸುವರ್ಣ ಹೊನ್ನೂರುಸ್ವಾಮಿ ಹಾಗೂ ಸರ್ವ ಸದಸ್ಯರು, ಹೊನ್ನಳ್ಳಿ ತಾಂಡಾದ ಪಟೇಲ್ ರಾಮ್ ನಾಯ್ಕ ಇವರು ಪಾಲ್ಗೊಳ್ಳಲಿದ್ದಾರೆ.
ಸಮಿತಿ ಅಧ್ಯಕ್ಷರಾದ ಡಿ. ಮಲ್ಲಕಾರ್ಜುನ, ಉಪಾಧ್ಯಕ್ಷರಾದ ಆರ್.ಟಿ. ರಾಮು ನಾಯ್ಕ್, ಪದಾಧಿಕಾರಿಗಳಾದ ಹೆಚ್.ಚಂದ್ರ ನಾಯ್ಕ್, ಆರ್. ಪ್ರಕಾಶ್ ನಾಯ್ಕ, ಆರ್.ವೆಂಕಟೇಶ್ ನಾಯ್ಕ್, ಸದಸ್ಯರಾದ ಎ.ಶ್ರೀನಿವಾಸ, ಆರ್.ಮಂಜು ನಾಯ್ಕ, ಆರ್.ಲಕ್ಷ್ಮಣ ನಾಯ್ಕ್, ಬಿ.ಸತ್ಯನಾರಾಯಣ, ಕರಿ ಸುರೇಶ್ ಇನ್ನಿತರರ ಸಹಯೋಗದಲ್ಲಿ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಲಿವೆ.
ಬೆಳಿಗ್ಗೆ 10ರಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಹಾಗೂ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರ ಇವರಿಂದ ಸ್ವಯಂ ಪ್ರೇರಿತ ರಕ್ತಾದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗಿದೆ. ಸದ್ಭಕ್ತರು ಹಾಗೂ ನಾಗರಿಕರು ಈ ಧಾರ್ಮಿಕ ಹಾಗೂ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಜ್ಜಯ್ಯನ ಕೃಪೆಗೆ ಪಾತ್ರರಾಗುವಂತೆ ಹೊನ್ನಳ್ಳಿ ತಾಂಡ, ಬೆಳಗಲ್ ತಾಂಡ, ಜಾನೆಕುಂಟೆ ತಾಂಡ, ತುಮಟಿ ತಾಂಡ, ಸಿದ್ದಾಪುರ ತಾಂಡದ ಸಮಸ್ತ ಎಲ್ಲಾ ನಾಯ್ಕರು, ಕಾರಿಬಾರಿ, ಡಾವ್ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಮತ್ತು ಮುಖಂಡರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್