ವಿಜಯಪುರ, 25 ಜುಲೈ (ಹಿ.ಸ.) :
ಆ್ಯಂಕರ್ : ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಕೆರೆ ತುಂಬುವ ಯೋಜನೆಯಿಂದ ಕೆರೆ ತುಂಬಿದ್ದು, ಗ್ರಾಮಸ್ಥರು, ರೈತರು ಹರ್ಷ ವ್ಯಕ್ತಪಡಿಸಿ, ಸಚಿವ ಎಂ.ಬಿ. ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೆರೆ ನಿರ್ಮಾಣವಾಗಿ ಕಳೆದು 15 ವರ್ಷವಾಗಿತ್ತು. ಆದರೆ ಇಲ್ಲಿಯವರೆಗೆ ಎರಡು ಬಾರಿ ಮಾತ್ರ ಕೆರೆ ತುಂಬಿದ್ದು, ಈ ಕೆರೆ ನಿರ್ಮಾಣವನ್ನು ಸಚಿವ ಡಾ.ಎಂ.ಬಿ ಪಾಟೀಲ ಮಾಡಿದ್ದಾರೆ. ಇದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದ ಜನರಿಗೆ ನೀರಾವರಿ ಮಾಡಲು ಸಾಧ್ಯವಾಗಿದ್ದು, ಈಗ ಮತ್ತೆ ಕೆರೆ ತುಂಬಿದ್ದರಿಂದ ರೈತರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಎಂ.ಬಿ ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ವಸಂತ ತಂಗಡಗಿ ಮಾತನಾಡಿ, ಕೆರೆ ತುಂಬಿದ್ದರಿಂದ ಗ್ರಾಮದ ಜನರಿಗೆ ತುಂಬಾ ಸಂತೋಷವಾಗಿದೆ. ಈ ಕೆರೆ ನಿರ್ಮಾಣವಾಗಿ ಎರಡು ಬಾರಿ ಇಷ್ಟು ಪ್ರಮಾಣ ನೀರು ತುಂಬಿದ್ದು ಎರಡು ಬಾರಿ ಮಾತ್ರ. ಕೆರೆ ತುಂಬಿದ್ದು ಸಚಿವ ಎಂ.ಬಿ ಪಾಟೀಲ ಅವರು ಕೊಡುಗೆ ಆಗಿದೆ. ಸುಮಾರು 27 ಎಕರೆ ವಿಶಾಲವಾದ ಪ್ರದೇಶದಲ್ಲಿ ಈಗ ನೀರು ತುಂಬಿದೆ. ಆದ್ದರಿಂದ ಎಂ.ಬಿ ಪಾಟೀಲ ಅವರಿಗೆ ಗ್ರಾಮಸ್ಥರು ಅಭಿನಂದನ ಸಲ್ಲಿಸುತ್ತೇವೆ ಎಂದರು.
ಗ್ರಾಮದ ಹಿರಿಯ ಮುಖಂಡ ಡಾ.ಬಿ.ಆರ್. ಗುಲಗಂಜಿ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾ ಕಾರ ಉಂಟಾಗುತ್ತಿತ್ತು. ಆದರೆ ಎಂ.ಬಿ. ಪಾಟೀಲ ಕೆರೆ ನಿರ್ಮಾಣ ಮಾಡಿದ್ದರಿಂದ ಇಲ್ಲಿ ಅಂತರ್ಜಲ ಹೆಚ್ಚಾಗಿದೆ. ಈಗ ಕೆರೆ ತುಂಬುವ ಯೋಜನೆಯಿಂದ ಕೆರೆ ತುಂಬಿದೆ. ಈಗ ತುಂಬಿರುವುದರಿಂದ ಮುಂದಿನ ದಿನ ಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರಾದ ವಿಠ್ಠಲ ಮುಚ್ಚಂಡಿ, ಗಿರಮಲ್ಲ ಮುಚ್ಚಂಡಿ, ರುದ್ರಪ್ಪ ತಂಗಡಿ, ನಿಂಗಪ್ಪ ಜಂಬಗಿ, ಶಿವಶಂಕರ ಹಟ್ಟಿ, ರಾಜೇಂದ್ರ ಕೊಣದಿ, ಶ್ರೀಶೈಲ್ ಬಿಜ್ಜರಗಿ, ವಿಠ್ಠಲ ದನ್ಯಾಳ, ಶರಣಪ್ಪ ಇಳಗೇರ, ರಮೇಶ ವಳಸಂಗ, ಶ್ರೀಶೈಲ ಕೊಣದಿ, ವಿಠ್ಠಲ ಪೂಜಾರಿ, ನಾಗು ಸಾರವಾಡ, ಸಂಪತ ಹಟ್ಟಿ ಸೇರಿದಂತೆ ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande