ದತ್ತಿ ಪ್ರಶಸ್ತಿಗೆ ಮಹಿಳಾ ಲೇಖಕಿಯರಿಂದ ಪುಸ್ತಕಗಳ ಆಹ್ವಾನ
ಬಳ್ಳಾರಿ, 25 ಜುಲೈ (ಹಿ.ಸ.) : ಆ್ಯಂಕರ್: ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ ದಿಂದ 2021 ರಿಂದ ಡಿಸೆಂಬರ್ 2024ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಮುದ್ರಣಗೊಂಡ ಮಹಿಳಾ ಲೇಖಕಿಯರು, ತಮ್ಮ ಪ್ರಕಟಿತ ಮೂರು ಪುಸ್ತಕಗಳನ್ನು ದತ್ತಿ ಪ್ರಶಸ್ತಿಗೆ ಕಳಿಸಿಕೊಡಲು ಕೋರಲಾಗಿದೆ. ದಿವಂಗತ ಲಕ
ದತ್ತಿ ಪ್ರಶಸ್ತಿಗೆ ಮಹಿಳಾ ಲೇಖಕಿಯರಿಂದ ಪುಸ್ತಕಗಳ ಆಹ್ವಾನ


ಬಳ್ಳಾರಿ, 25 ಜುಲೈ (ಹಿ.ಸ.) :

ಆ್ಯಂಕರ್: ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ ದಿಂದ 2021 ರಿಂದ ಡಿಸೆಂಬರ್ 2024ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಮುದ್ರಣಗೊಂಡ ಮಹಿಳಾ ಲೇಖಕಿಯರು, ತಮ್ಮ ಪ್ರಕಟಿತ ಮೂರು ಪುಸ್ತಕಗಳನ್ನು ದತ್ತಿ ಪ್ರಶಸ್ತಿಗೆ ಕಳಿಸಿಕೊಡಲು ಕೋರಲಾಗಿದೆ.

ದಿವಂಗತ ಲಕ್ಷ್ಮಮ್ಮ ಗಂಡ ದೊಡ್ಡ ಪಂಪಣ್ಣ ಗೋನಾಳ ಇವರ ಸ್ಮರಣಾರ್ಥವಾಗಿ ಪತ್ರಕರ್ತರಾದ ಜಿ.ಎಸ್. ಗೋನಾಳ್ ಅವರು ತಮ್ಮ ಅಜ್ಜಿಯವರ ಸ್ಮರಣಾರ್ಥವಾಗಿ ಕೊಪ್ಪಳ ಜಿಲ್ಲೆಯ ಮಹಿಳಾ ಲೇಖಕಿಯರ ಅತ್ಯುತ್ತಮ ಕೃತಿಗೆ, ದತ್ತಿ ಪ್ರಶಸ್ತಿಯನ್ನು ಕೊಡಲು ತಿರುಳಗನ್ನಡ ಸಾಹಿತಿಗಳ ಸಹಕಾರಿ ಸಂಘವು ತೀರ್ಮಾನಿಸಿದ್ದು ಕಾರಣ 2021 ರಿಂದ ಡಿಸೆಂಬರ್ 2024ರ ವರೆಗೆ ಪ್ರಕಟಗೊಂಡ ಮಹಿಳಾ ಲೇಖಕಿಯರು ದತ್ತಿ ಪ್ರಶಸ್ತಿ ಆಯ್ಕೆಗಾಗಿ ಕಥೆ, ಕವನ ಸಂಕಲನ, ಚುಟುಕು ಸಂಕಲನ, ವಿಮರ್ಶೆಗ್ರಂಥ, ನಾಟಕಗಳು, ಇತರೆ ಯಾವುದೇ ಪ್ರಕಾರದ ಪುಸ್ತಕಗಳನ್ನು ಮಹಿಳಾ ಲೇಖಕಿಯರು ತಮ್ಮ ಮೂರು ಪುಸ್ತಕಗಳನ್ನು ದತ್ತಿ ಪ್ರಶಸ್ತಿ ಆಯ್ಕೆಗಾಗಿ ಶ್ರೀ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷರು, ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ, ಕಲ್ಯಾಣ ನಗರ ಮೊದಲನೇ ಕ್ರಾಸ್, ಕೊಪ್ಪಳ ಅಥವಾ ಜಿ. ಎಸ್. ಗೋನಾಳ್. ನಿರ್ದೇಶಕರು, ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ, ಶ್ರೀ ಬಸವ ಸದನ 21ನೇ ವಾರ್ಡ್, ಪದಕಿ ಕಾಲೋನಿ ಕೊಪ್ಪಳ. ಈ ವಿಳಾಸಕ್ಕೆ 25.08.2025 ರ ಒಳಗೆ ಪುಸ್ತಕಗಳ ಮೂರು ಪ್ರತಿಗಳನ್ನು ಕಳಿಸಿಕೊಡಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9844049205. 9448025067.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande