ಚಂಡೀಗಡ, 25 ಜುಲೈ (ಹಿ.ಸ.) :
ಆ್ಯಂಕರ್ : ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಮಾದಕವಸ್ತು ಕಳ್ಳಸಾಗಣೆ ದಂಧೆಯನ್ನು ಭೇದಿಸಿ 15 ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಪ್ರಮುಖ ಶಂಕಿತ ಆರೋಪಿ ರಮೇಶ್ ಕುಮಾರ್ ಅಲಿಯಾಸ್ ‘ಮೇಚಿ’ ಯನ್ನು ಬಂಧಿಸಿದ್ದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಘಟನೆಯು ಫಿರೋಜ್‌ಪುರ ಜಿಲ್ಲೆಯ ಥಾನಾ ಘಲ್ ಖುರ್ದ್ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಶುಕ್ರವಾರ ಪ್ರಕಟಿಸಿದ ಮಾಹಿತಿಯಂತೆ, ಬಂಧಿತನ ಬಳಿ ಭಾರೀ ಪ್ರಮಾಣದ ಹೆರಾಯಿನ್ ಪತ್ತೆಯಾಗಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕಳ್ಳಸಾಗಣೆಗೆ ಸಂಬಂಧಿತ ದಂಧೆಯ ಭಾಗವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣವು ಗಡಿಯಾಚೆ ಮಾದಕವಸ್ತು ಕಳ್ಳಸಾಗಣೆ ಜಾಲದ ವಿರುದ್ಧ ನಾವು ನಡೆಸುತ್ತಿರುವ ನಿರಂತರ ಹೋರಾಟದ ಭಾಗವಾಗಿದೆ. ಆರೋಪಿಯ ಹಳೆಯ ಸಂಪರ್ಕಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆತ ಪಂಜಾಬ್ ಸೇರಿದಂತೆ ಇತರ ರಾಜ್ಯಗಳಿಗೆ ಮಾದಕವಸ್ತು ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸಿರು ಶಂಕೆ ಇದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa