ಪ. ಬಂಗಾಳದಲ್ಲಿ ಸಿಡಿಲು ಬಡಿದು 13 ಜನ ಸಾವು
ಕೋಲ್ಕತ್ತಾ, 25 ಜುಲೈ (ಹಿ.ಸ.) : ಆ್ಯಂಕರ್ : ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಂಕುರಾ ಜಿಲ್ಲೆಯಲ್ಲಿ ಏಳು, ಪೂರ್ವ ಬುರ್ದ್ವಾನ್‌ನಲ್ಲಿ ಐವರು ಹಾಗೂ ಪಶ್ಚಿಮ ಮೇದಿನಿಪುರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರ
Death


ಕೋಲ್ಕತ್ತಾ, 25 ಜುಲೈ (ಹಿ.ಸ.) :

ಆ್ಯಂಕರ್ : ಕಳೆದ 24 ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಂಕುರಾ ಜಿಲ್ಲೆಯಲ್ಲಿ ಏಳು, ಪೂರ್ವ ಬುರ್ದ್ವಾನ್‌ನಲ್ಲಿ ಐವರು ಹಾಗೂ ಪಶ್ಚಿಮ ಮೇದಿನಿಪುರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಬಂಕುರಾ ಜಿಲ್ಲೆ: ಖಿರಿ ಗ್ರಾಮದಲ್ಲಿ ಜಿಯಾವುಲ್ ಹಕ್ ಮೊಲ್ಲಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾದರು. ಪತ್ರಸೈರ್‌ನಲ್ಲಿ ಜೀವನ್ ಘೋಷ್, ಒಂಡಾದ ನಾರಾಯಣ್ ಸವಾರ್, ಇಂಡಾಸ್‌ನ ಶೇಖ್ ಇಸ್ಮಾಯಿಲ್, ಜೈಪುರದ ಉತ್ತಮ್ ಭೂನ್ಯಾ ಸಹ ಸಿಡಿಲಿಗೆ ಬಲಿಯಾಗಿದ್ದಾರೆ

ಪೂರ್ವ ಬುರ್ದ್ವಾನ್ ಜಿಲ್ಲೆ: ಮಾಧಬ್ಧಿಯಲ್ಲಿ ಸನಾತನ ಪಾತ್ರ, ಭೇಡಿಯಾ ಗ್ರಾಮದ ಸಂಜಯ್ ಹೆಬರರಾಮ್ ಸಾವಿಗೀಡಾಗಿದ್ದಾರೆ.

ಪಶ್ಚಿಮ ಮೇದಿನಿಪುರ: ಚಂದ್ರಕೋಣದ ಲಕ್ಷ್ಮಿಕಾಂತ್ ಪ್ಯಾನ್ ಮೃತರಾಗಿದ್ದಾರೆ.

ಹವಾಮಾನ ಎಚ್ಚರಿಕೆ: ಜುಲೈ 27 ರವರೆಗೆ ದಕ್ಷಿಣ ಬಂಗಾಳದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಮಳೆಯಾಗುವ ಸಾಧ್ಯತೆ ಇದ್ದು, ನಾಗರಿಕರು ಜಾಗರೂಕತೆ ವಹಿಸುವಂತೆ ಹವಾಮಾನ ಇಲಾಖೆ ಹಾಗೂ ರಾಜ್ಯ ಆಡಳಿತ ಎಚ್ಚರಿಕೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande