ಗುರುವಾರದ ರಾಶಿ ಫಲ
ಹುಬ್ಬಳ್ಳಿ, 24 ಜುಲೈ (ಹಿ.ಸ.) : ಆ್ಯಂಕರ್ : ಗುರುವಾರದ ರಾಶಿ ಫಲ *ಮೇಷ ರಾಶಿ.* ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆರ್ಥಿಕ ಪ್ರಗತಿ ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ವ್ಯಾಪಾರ
Horoscope


ಹುಬ್ಬಳ್ಳಿ, 24 ಜುಲೈ (ಹಿ.ಸ.) :

ಆ್ಯಂಕರ್ : ಗುರುವಾರದ ರಾಶಿ ಫಲ

*ಮೇಷ ರಾಶಿ.*

ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಆರ್ಥಿಕ ಪ್ರಗತಿ ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ವ್ಯಾಪಾರದಲ್ಲಿ ನಿರೀಕ್ಷೆಗಳನ್ನು ಪೂರೈಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ.

*ವೃಷಭ ರಾಶಿ.*

ಆತ್ಮೀಯ ಸ್ನೇಹಿತರೊಂದಿಗೆ ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ದೂರದ ಬಂಧು ಮಿತ್ರರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ. ಕೈಗೊಂಡ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ.

*ಮಿಥುನ ರಾಶಿ.*

ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯಾಪಾರಗಳಲ್ಲಿ ಗೊಂದಲಮಯ ಪರಿಸ್ಥಿತಿಗಳಿರುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ.

*ಕಟಕ ರಾಶಿ.*

ಕೌಟುಂಬಿಕ ವಿಷಯಗಳಲ್ಲಿನ ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ಬಂಧು ಮಿತ್ರರೊಂದಿಗೆ ವಿವಾದದ ಸೂಚನೆಗಳಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಪ್ರಮುಖ ಕೆಲಸಗಳು ಮುಂದೂಡಲ್ಪಡುತ್ತವೆ. ಉದ್ಯೋಗದಲ್ಲಿ ಕೆಲವರ ವರ್ತನೆ ನಿರಾಶಾದಾಯಕವಾಗಿರುತ್ತದೆ. ನಿರುದ್ಯೋಗಿಗಳಿಗೆ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

*ಸಿಂಹ ರಾಶಿ.*

ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭ ಸುದ್ದಿ ದೊರೆಯುತ್ತದೆ. ಉದ್ಯೋಗಗಳು ತೃಪ್ತಿಕರವಾಗಿ ನಡೆಯುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ.

*ಕನ್ಯಾ ರಾಶಿ.*

ಮಹತ್ವದ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ವಿಸ್ತಾಗೊಳ್ಳುತ್ತದೆ. ಗೌರವಕ್ಕೆ ಕೊರತೆ ಇರುವುದಿಲ್ಲ. ವ್ಯಾಪಾರ ವಿಸ್ತರಣೆಯ ಹೊಸ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಉದ್ಯೋಗದಲ್ಲಿನ ಹೆಚ್ಚುವರಿ ಜವಾಬ್ದಾರಿಗಳಿಂದ ಮುಕ್ತಿ ದೊರೆಯುತ್ತವೆ.

*ತುಲಾ ರಾಶಿ.*

ವ್ಯರ್ಥ ಖರ್ಚುಗಳ ವಿಷಯದಲ್ಲಿ ಮರುಪರಿಶೀಲನೆ ಮಾಡಬೇಕು. ಕುಟುಂಬದ ಸದಸ್ಯರ ವರ್ತನೆಯು ಕೆಲವು ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ. ಆರಂಭವಾದ ಕೆಲಸಗಳುಗಳು ಮಧ್ಯದಲ್ಲಿಯೇ ನಿಲ್ಲುತ್ತವೆ. ಉದ್ಯೋಗದಲ್ಲಿ ವ್ಯರ್ಥ ಖರ್ಚುಗಳು ಅಧಿಕವಾಗಿರುತ್ತದೆ. ವ್ಯಾಪಾರಗಳು ನಿಧಾನವಾಗಿರುತ್ತವೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ.

*ವೃಶ್ಚಿಕ ರಾಶಿ.*

ಆರ್ಥಿಕ ಪರಿಸ್ಥಿತಿ ಸೀಮಿತವಾಗಿರುತ್ತದೆ. ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಬಾಲ್ಯದ ಗೆಳೆಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ವಿಳಂಬವಾಗಿ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ನಡೆಯುತ್ತವೆ. ಕುಟುಂಬದ ಸದಸ್ಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ಧನುಸ್ಸು ರಾಶಿ.*

ಹಣಕಾಸಿನ ವ್ಯವಹಾರಗಳು ನಿರೀಕ್ಷೆಯಂತೆ ನಡೆಯುತ್ತವೆ. ಬಂಧು-ಮಿತ್ರರೊಂದಿಗೆ ಮನೆಯಲ್ಲಿ ಭೋಜನಾ ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಆರಂಭಿಸಿದ ಹೊಸ ವ್ಯಾಪಾರಗಳು ಲಾಭವನ್ನು ಪಡೆಯುತ್ತವೆ. ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ನಿರುದ್ಯೋಗಿಗಳು ಕಾರ್ಯ ಸಿದ್ಧಿ ಉಂಟಾಗುತ್ತದೆ.

*ಮಕರ ರಾಶಿ.*

ಬಂಧು ಮಿತ್ರರ ವರ್ತನೆಯಿಂದ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ. ವೃತ್ತಿಪರ ವ್ಯಾಪಾರಗಳಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿನ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿ ಇರುವುದಿಲ್ಲ. ಕೈಗೆತ್ತಿಕೊಂಡ ಕೆಲಸ ನಿಧಾನವಾಗಿ ಸಾಗುತ್ತದೆ. ಅಗತ್ಯಕ್ಕೆ ಕೈಯ್ಯಲ್ಲಿ ಹಣ ಇಲ್ಲದೆ ತೊಂದರೆ ಅನುಭವಿಸುತ್ತೀರಿ. ಪ್ರಯಾಣದಲ್ಲಿ ಆತುರ ಒಳ್ಳೆಯದಲ್ಲ.

*ಕುಂಭ ರಾಶಿ.*

ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಧನಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳ ಸಂಪರ್ಕ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ.

*ಮೀನ ರಾಶಿ.*

ಆಪ್ತ ಮಿತ್ರರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ತೊಂದರೆ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾ ಉಂಟಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಆಲೋಚಿಸಿ ಮಾತನಾಡುವುದು ಉತ್ತಮ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande