ವಿಜಯಪುರ, 23 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಯನಿರ್ವಾಹಕ ಎಂಜಿನಿಯರ್ ರು(ವಿ) ಕಾರ್ಯ ಮತ್ತು ಪಾಲನಾ ವಿಭಾಗ ಹೆಸ್ಕಾಂ, ಜಮಖಂಡಿ ಇವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಸ.ನಂ. ೨೨೭ ರಲ್ಲಿ ಪಿ.ಎಮ್- ಕುಸುಮ್ ಸೋಲಾರ ಲೆವೆಲ್ ಫೀಡರ್ ಸೋಲಾರೈಸೇಶನ್ ಯೋಜನೆ ಕಾಮಗಾರಿಯಲ್ಲಿ ಬರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ವಿನಂತಿಸಿರುವ ಕಾರಣ, ಸದರಿ ೨೨೮ ನೀಲಗಿರಿ ಮತ್ತು ಇತರ ಜಾತಿಯ ಮರಗಳನ್ನು ಕಟಾವಣೆ ಮಾಡಿ ತೆರವುಗೊಳಿಸಲು ಸಾರ್ವಜನಿಕ/ ಸಂಘ ಸಂಸ್ಥೆಗಳ ಯಾವುದೇ ಆಕ್ಷೇಪಣೆ/ ಅಹವಾಲು/ ತಂಟೆ ತಕರಾರುಗಳು ಇದ್ದಲ್ಲಿ, ಈ ಸಾರ್ವಜನಿಕ ಪ್ರಕಟಣೆಯ ನಂತರದ ೦೭ ದಿನಗಳಲ್ಲಿ ವಲಯ ಅರಣ್ಯ ಅಧಿಕಾರಿ, ಜಮಖಂಡಿ/ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪವಿಭಾಗ ಜಮಖಂಡಿ/ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಬಾಗಲಕೋಟೆ ವಿಭಾಗ ಇವರ ಕಛೇರಿಗೆ ಲಿಖಿತವಾಗಿ ಸಲ್ಲಿಸಲು ವಿನಂತಿಸಲಾಗಿದ್ದು, ಅವಧಿ ಮೀರಿದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande