ಮುಳಗುಂದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಗಮನಕ್ಕೆ
ಗದಗ, 23 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಪಟ್ಟಣ ಪಂಚಾಯತ ಮುಳಗುಂದ ವ್ಯಾಪ್ತಿಯಲ್ಲಿ ಬರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಅವರು ನ್ಯೂ ಅರ್ಬನ್ ಪೂವರ್ಟಿ ಅಲಿವೇಷನ್ ಮಿಷನ್ ಅಭಿಯಾನವನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸುತ್ತಿದೆ. 2025-26ನೇ ಸಾಲ
ಪೋಟೋ


ಗದಗ, 23 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಪಟ್ಟಣ ಪಂಚಾಯತ ಮುಳಗುಂದ ವ್ಯಾಪ್ತಿಯಲ್ಲಿ ಬರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಅವರು ನ್ಯೂ ಅರ್ಬನ್ ಪೂವರ್ಟಿ ಅಲಿವೇಷನ್ ಮಿಷನ್ ಅಭಿಯಾನವನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸುತ್ತಿದೆ.

2025-26ನೇ ಸಾಲಿನ ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕರ ಪತ್ರದ ಅನ್ವಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಮಿಷೋ, ಅಮೇಜಾನ್, ಪ್ಲಿಪ್‌ಕಾರ್ಟ, ಡುಂಜೋ ಮತ್ತು ಆರೈಕೆ ಕೆಲಸಗಾರರು, ತ್ಯಾಜ್ಯ ಕೆಲಸಗಾರರು, ಮನೆ ಕೆಲಸಗಾರರು, ಸಾರಿಗೆ ಕಾರ್ಮಿಕರು, ಸರಕು ಸಾಗಾಣಿಕೆ ವಾಹನ ಚಾಲಕರ ಸಂಘ ಇತ್ಯಾಧಿ ಕಾರ್ಮಿಕರ ದತ್ತಾಂಶ ಸಂಗ್ರಹಣೆ ಮಾಡಲು ಅಭಿಯಾನ ನಿರ್ದೇಶಕರ ನಿರ್ದೇಶನದನ್ವಯ 2025ರ ಜುಲೈ-30ರಂದು ಕಛೇರಿ ವೇಳೆಯಲ್ಲಿ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಹಿಂದೂಸ್ತಾನ್ ಸಮಾಚಾರ್ / Lalita M P


 rajesh pande