ಕೊಪ್ಪಳ, 23 ಜುಲೈ (ಹಿ.ಸ.) :
ಆ್ಯಂಕರ್ : ತಳಕಲ್, ಕುಕನೂರು ಮತ್ತು ಮುಧೋಳ ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಬಹು ಬೇಡಿಕೆ ಇರುವ ವೃತ್ತಿಗಳ ಪ್ರವೇಶಕ್ಕೆ ಆಫ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಂಸ್ಥೆಗಳಲ್ಲಿ ವಿದ್ಯುನ್ಮಾನ ದುರಸ್ತಿಗಾರ, ಜೋಡಣೆಗಾರ, ಮಷಿನಿಷ್ಟ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಟರ್ನರ್, ಕೊಪಾ, ಸಿ.ಎನ್.ಸಿ ಮಷನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಎಲೆಕ್ಟಿçಕಲ್ ವೆಹಿಕಲ್, ವರ್ಚುವಲ್ ಅನಲೈಸಸ್ ಮತ್ತು ಡಿಸೈನರ್, ಇಂಜಿನಿಯರ್ ಡಿಸೈನ್ ಟೆಕ್ನೆಷಿಯನ್, ಮ್ಯಾನುಫೆಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೆಷನ್, ಇಂಡಸ್ಟಿçಯಲ್ ರೋಬೋಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫೆಕ್ಚರಿಂಗ್ ವೃತ್ತಿಗಳಲ್ಲಿ ಸಿಟಿಎಸ್ ಮತ್ತು ಪಿಪಿಪಿ ಅಡಿಯಲ್ಲಿ ಸೀಟುಗಳು ಲಭ್ಯವಿರುತ್ತವೆ.
ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆಗಸ್ಟ್ 30 ರೊಳಗೆ ಸಂಸ್ಥೆಗಳಿಗೆ ಮೂಲ ದಾಖಲಾತಿಗಳೊಂದಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಳಕಲ್, ಕುಕನೂರು ಮತ್ತು ಮುಧೋಳ, ಮೊ.ಸಂ: 9741744109, 9964247098, 8970017916 ಮತ್ತು 9740358208 ಕ್ಕೆ ಸಂಪರ್ಕಿಸಬಹುದು ಎಂದು ತಳಕಲ್‌ನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್