ವಿಜಯಪುರ, 23 ಜುಲೈ (ಹಿ.ಸ.) :
ಆ್ಯಂಕರ್ : ಕೃಷಿ ಅಧ್ಯಯನ ಪ್ರವಾಸ ರೈತರಲ್ಲಿ ಉತ್ಸಾಹ ಬೆಳೆಸುತ್ತದೆ. ಜತೆಗೆ ಹೊಸ ಪ್ರಯೋಗಗಳಿಗೆ ಪ್ರೇರಣೆ ನೀಡುತ್ತದೆ. ರೈತನೇ ಮೊದಲ ಕೃಷಿ ವಿಜ್ಞಾನಿ'' ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ನಿರಾಣಿ ಸಮೂಹ ಸಂಸ್ಥೆಯಲ್ಲಿ ಸಕ್ಕರೆ ಕಾರ್ಖಾನೆಯಿಂದ ಮಹಾರಾಷ್ಟ್ರದಲ್ಲಿ ಕೃಷಿ ಅಧ್ಯಯನ ಪೂರೈಸಿ ಬಂದ ರೈತರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಿ 4 ದಿನಗಳ ಕೃಷಿ ಅಧ್ಯಯನ ರೈತರಿಗೆ ಸಂತಸ ತಂದಿದೆ. ಸೂಕ್ತ ಸಮಯಕ್ಕೆ ಉಳುಮೆ, ರಾಶಿ ಮಾಡುವ ವಿಧಾನ ಸೇರಿದಂತೆ ಅಲ್ಲಿನ ಪ್ರಗತಿದಾಯಕ ಕೃಷಿ ಕುರಿತು ಮಾಹಿತಿ ಪಡೆದುಕೊಂಡು ಬಂದಿರುವುದು ಉತ್ತಮ ವಿದ್ಯಮಾನ, ಎಂದರು.
“ಕಾರ್ಖಾನೆ ಪರವಾಗಿ 200 ರೈತರನ್ನು '
ಅಧ್ಯಯನಕ್ಕೆ ಕಳುಹಿಸಿಕೊಡಲಾಗಿತ್ತು. ಮಹಾರಾಷ್ಟ್ರದ ಪಾಟಸ್ಕರ್ ಸಕ್ಕರೆ ಕಾರ್ಖಾನೆ, ಉರುಳಿಕಾಂಚನ ಕೃಷಿ ಕ್ಷೇತ್ರ, ಬಾರಾಮತಿಯ ಕೃಷಿ ವಿಜ್ಞಾನ ಕೇಂದ್ರ, ರಾಹುರಿ ಕೃಷಿ ವಿದ್ಯಾಪೀಠ, ಜೈನ ಇರಿಗೇಶನ್ ಸಂಸ್ಥೆಗೆ ಭೇಟಿ ನೀಡಿ ಅನುಭವ ಪಡೆದುಕೊಂಡಿದ್ದಾರೆ. ಆ ಭಾಗದ ರೈತರು ವ ಎಕರೆಗೆ 80 ರಿಂದ 100 ಟನ್ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಜತೆಗೆ ನೀರು ಮಿತವಾಗಿ ಬಳಸಿ ಭೂಮಿ ಸವಳು-ಜವಳಾಗಂದತೆ ಎಚ್ಚರ ವಹಿಸಿದ್ದಾರೆ, ಎಂದರು.
ರೈತ ಮುಖಂಡ ಸುಭಾಸ ಶಿರಬೂರ, ಎಸ್.ಪಿ.ದಾನಪ್ಪಗೋಳ, ಮಹಾದೇವ ಮುರನಾಳ, ಚಿನ್ನಪ್ಪ ಪುರಾಣಿಕ ಪ್ರವಾಸದ ಅನುಭವ ಹಂಚಿಕೊಂಡರು. ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande