ವಿಜಯಪುರ, 23 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಮಿಕ ಇಲಾಖೆಯಲ್ಲಿ ಆದ 8 ಕೋಟಿ ಹಣ ಹಗರಣದ ಬಗ್ಗೆ ಈಗಾಗಲೇ ತನಿಖೆಯಾಗಿದೆ ಫೈನಲ್ ಹಂತದಲ್ಲಿದೆ ಎಂದು ಬಾಗಲಕೋಟೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಣ ದುರ್ಬಳಕೆಯ ಹಗರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಖಂಡಿತವಾಗಿ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು, ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ತನಿಖೆಯಾಗಬೇಕು ಅಂತ ನಾನೆ ಸುಮೊಟೊ ಆಗಿ ಬರೆದಿದ್ದು. ಸ್ವಲ್ಪ ವಿಳಂಭ ಆಗಿದೆ ನಿಜ ಆದರೆ, ತಪ್ಪಿತಸ್ಥರು ಯಾರೇ ಇದ್ಧರೂ ಕ್ರಮ ಕೈಗೊಳ್ತೇವೆಂದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಬಿಜೆಪಿಯವರಿಗೆ ಕೇಳಿ ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು. ಯಾವ ಕಾರಣದಿಂದ ಅವರು ರಾಜೀನಾಮೆ ಕೊಡಬೇಕಾಗಿ ಬಂತು ಅಂತ. ಅದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ವಾ? ಅವರು ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದವರು ಮಂಡಿಸಿದ ನಿರ್ಣಯ ಒಪ್ಪಿಕೊಂಡಿದ್ದರು ಎಂದು ನನಗೆ ಮಾಹಿತಿ. ಹಾಗಾಗಿ ಎಲ್ಲರೂ ಒತ್ತಡ ಮಾಡಿ ರಾಜೀನಾಮೆ ಕೊಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಇಡೀ ಕರ್ನಾಟಕದಲ್ಲೇ ಈಗ ಮಹಿಳೆಯರಿಗೆ ಬಸ್ ಫ್ರೀ ಇದೆ.ಕಾರ್ಮಿಕರಿಗೆ ಫ್ರೀ ಮಾಡೋದು ಬಹಳ ಕಷ್ಟ ಇದೆ. ಕಾರ್ಮಿಕರನ್ನು ಮೊದಲು ಬೈಪರ್ಕೇಶನ್ ಮಾಡಬೇಕು. ನಮ್ಮ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ದುಡ್ಡಿಲ್ಲ ಎಂದು ತಿಳಿಸಿದರು.
ರಾಜ್ಯ ಸರಕಾರದಿಂದ ಆನ್ ಲೈನ್ ಕ್ಯಾಶ್ ವಹಿವಾಟಿಗೆ ವ್ಯಾಪಾರಸ್ಥರ ವಿರೋಧಕ್ಕೆ ಲಾಡ್ ಪ್ರತಿಕ್ರಿಯಿಸಿ,ಈ ಬಗ್ಗೆ ಇದುವರೆಗೆ ಜನರು ಮಾತಾಡಿಲ್ವಾ ಈವಾಗ ಮಾತಾಡ್ತಿದ್ದಾರಾ? ಜಿ ಎಸ್ ಟಿ ಬರುವಾಗ ಜನರು ಮಾತಾಡಿಲ್ವಾ? ಈ ಬಗ್ಗೆ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಜಿಎಸ್ ಟಿ ಅನ್ನೋದು ಇನ್ಕ್ಲೂಜಿವ್ ಆಗಿರೋದರಿಂದ. ಪಾಪ್ ಕಾರ್ನ್ ಇದ್ರೆ ಒಂದು ಜಿಎಸ್ ಟಿ . ಖಾಲಿ ಪಾಪ್ಕಾರ್ನ್ ಇದ್ರೆ ಒಂದು ಜಿ ಎಸ್ ಟಿ.ಅದಕ್ಕೆ ಹನಿ ಇದ್ರೆ ಒಂದು ಜಿಎಸ್ಟಿ ಇದೆ. ಮಾತಾಡೋದಿದ್ರೆ ಸಂಪೂರ್ಣವಾಗಿ ಕೂತ್ಕೊಂಡು ಮಾತಾಡಬಹುದು. ಮುಖ್ಯಮಂತ್ರಿ ಈ ಬಗ್ಗೆ ಸಭೆ ಕರೆದಿದ್ದಾರೆ, ಇದಕ್ಕೆ ಒಂದು ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande