ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರ
ಶಿವಮೊಗ್ಗ, 22 ಜುಲೈ (ಹಿ.ಸ.) : ಆ್ಯಂಕರ್ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆ.05 ರಿಂದ 07 ರವರೆಗೆ ವಿಜ್ಞಾನ ಸಂವಹನ ಮತ್ತು ಪ್ರೇಕ್ಷಕರನ್ನು ತಲುಪುವ ತಂತ್ರಗಳು ಎಂಬ ವಿಷಯದ ಕುರಿತು ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗ
ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರ


ಶಿವಮೊಗ್ಗ, 22 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆ.05 ರಿಂದ 07 ರವರೆಗೆ ವಿಜ್ಞಾನ ಸಂವಹನ ಮತ್ತು ಪ್ರೇಕ್ಷಕರನ್ನು ತಲುಪುವ ತಂತ್ರಗಳು ಎಂಬ ವಿಷಯದ ಕುರಿತು ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.

ಈ ಕಾರ್ಯಾಗಾರದಲ್ಲಿ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶೈಕ್ಷಣಿಕ ತಜ್ಞರು, ಭಾಗವಹಿಸಬಹುದಾಗಿದ್ದು, ಆಸಕ್ತ ಪ್ರತಿನಿಧಿಗಳು Google-form-https://forms.gle/iyPn85smZ81RGGnf6 ಮೂಲಕ ದಿ:02/08/2025 ರೊಳಗಾಗಿ ನೋಂದಾಯಿಸಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರಾದ ಶ್ರೀನಿವಾಸು ವಿ. ಕೆ. -ಮೊ: 9620767819 ಅಥವಾ ಅಕಾಡೆಮಿಯ ವೆಬ್ ಸೈಟ್ https://kstacademy.in ಸಂಪರ್ಕಿಸಬಹುದಾಗಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande