ಕೊಪ್ಪಳ, 22 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಆರ್.ಎ.ಪಿ.ಡಿ.ಆರ್.ಪಿ (ಐಪಿಡಿಎಸ್) ತಂತ್ರಾಂಶದ ನಿರ್ವಹಣೆಯ ನಿಮಿತ್ಯ ಜು. 25ರ ರಾತ್ರಿ 8.30 ಗಂಟೆಯಿಂದ ಜು. 27ರ ರಾತ್ರಿ 10 ಗಂಟೆಯವರೆಗೆ ಆನ್‍ಲೈನ್ ಮತ್ತು ಆಫ್ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಮೊಟ್ಲಾ ನಾಯ್ಕ್ ಅವರು ತಿಳಿಸಿದ್ದಾರೆ.
ಕೊಪ್ಪಳ ಜೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಜು. 25ರ ರಾತ್ರಿ 8.30 ಗಂಟೆಯಿಂದ ಜು. 27ರ ರಾತ್ರಿ 10 ಗಂಟೆಯವರೆಗೆ ಆರ್.ಎ.ಪಿ.ಡಿ.ಆರ್.ಪಿ (ಐಪಿಡಿಎಸ್), ತಂತ್ರಾಂಶದ ನಿರ್ವಹಣೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿರುವುದರಿಂದ ಈ ಅವಧಿಯಲ್ಲಿ ಜೆಸ್ಕಾಂ ಇಲಾಖೆಯ ಆನ್‍ಲೈನ್, ಆಫ್ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಭರಿಸುವುದು, ಹೊಸ ಅರ್ಜಿಗಳ ನೋಂದಣಿ ಮತ್ತು ಇತರೆ ಆನ್‍ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದ್ದು, ಕೊಪ್ಪಳ ಮತ್ತು ಭಾಗ್ಯನಗರ ವ್ಯಾಪ್ತಿಯ ಗ್ರಾಹಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್