ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆ
ಶಿಮ್ಲಾ, 02 ಜುಲೈ (ಹಿ.ಸ.) : ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಜುಲೈ 5 ರಿಂದ 7 ರವರೆಗೆ ಭಾರಿ ಮಳೆಯ ಮುನ್ಸೂಚನೆಯಿದೆ. ಹವಾಮಾನ ಇಲಾಖೆ ಕಿತ್ತಳೆ ಎಚ್ಚರಿಕೆ ಮತ್ತು ಜುಲೈ 4ರ ತನಕ ಹಳದಿ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೂಕುಸಿತ, ನದಿಗಳ ಉಕ್ಕು ಹರಿವು ಹಾಗೂ ಜೀವ ಹಾನಿಯ ಭೀತಿ
Rain alert


ಶಿಮ್ಲಾ, 02 ಜುಲೈ (ಹಿ.ಸ.) :

ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಜುಲೈ 5 ರಿಂದ 7 ರವರೆಗೆ ಭಾರಿ ಮಳೆಯ ಮುನ್ಸೂಚನೆಯಿದೆ. ಹವಾಮಾನ ಇಲಾಖೆ ಕಿತ್ತಳೆ ಎಚ್ಚರಿಕೆ ಮತ್ತು ಜುಲೈ 4ರ ತನಕ ಹಳದಿ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೂಕುಸಿತ, ನದಿಗಳ ಉಕ್ಕು ಹರಿವು ಹಾಗೂ ಜೀವ ಹಾನಿಯ ಭೀತಿ ಉಂಟಾಗಿದೆ.

ಮಂಡಿ ಜಿಲ್ಲೆಯ ತುನಾಗ್, ಕರ್ಸೋಗ್ ಸೇರಿ ಹಲವೆಡೆ ಮೇಘಸ್ಫೋಟ ಸಂಭವಿಸಿದ್ದು, ಜನಜೀವನ ತೀವ್ರವಾಗಿ ಅಸ್ತವ್ಯಸ್ತವಾಗಿದೆ. ಇದುವರೆಗೆ 10 ಜನರು ಮೃತರಾಗಿದ್ದು, 34 ಮಂದಿ ಕಾಣೆಯಾಗಿದ್ದಾರೆ. 370 ಜನರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.

ಜೂನ್ 20 ರಿಂದ ಜುಲೈ 1ರವರೆಗೆ 51 ಮಂದಿ ಮೃತಪಟ್ಟಿದ್ದು, 283 ಕೋಟಿ ರೂ.ಗಳ ನಷ್ಟ ಸಂಭವಿಸಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಪರಿಸ್ಥಿತಿಗೆ ತೀವ್ರ ಶೋಕ ವ್ಯಕ್ತಪಡಿಸಿ, ಪೀಡಿತರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದಿದ್ದಾರೆ. ರಾಜ್ಯದ ಜನತೆ ಮುನ್ನೆಚ್ಚರಿಕೆಯೊಂದಿಗೆ ನಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande