ನವದೆಹಲಿ, 02 ಜುಲೈ (ಹಿ.ಸ.) :
ಆ್ಯಂಕರ್ : ದೇಶದಾದ್ಯಂತ ಇತ್ತೀಚೆಗಿನ ಹೃದಯಾಘಾತ ಮತ್ತು ಹಠಾತ್ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೊರೊನಾ ಲಸಿಕೆಯ ಮೇಲೆ ವ್ಯಕ್ತವಾದ ಅನುಮಾನಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕೋವಿಡ್-19 ಲಸಿಕೆ ಮತ್ತು ಈ ಸಾವಿನ ನಡುವಲ್ಲಿ ಯಾವುದೇ ನೇರ ಸಂಬಂಧವಿಲ್ಲ ಎಂದು ಸಚಿವಾಲಯ ಹೇಳಿದೆ.
ಐಸಿಎಂಆರ್ ಹಾಗೂ ಎನ್ ಸಿಡಿಸಿ ನಡೆಸಿದ ಅಧ್ಯಯನಗಳು ಈ ಸಂಬಂಧ ಸಂಪೂರ್ಣ ವಿಜ್ಞಾನಾಧಾರಿತ ಪುರಾವೆಗಳನ್ನು ನೀಡಿದ್ದು, ಲಸಿಕೆ ಯುವ ವಯಸ್ಸಿನವರು ಸೇರಿದಂತೆ ಎಲ್ಲರಿಗೂ ಸುರಕ್ಷಿತ ಎಂದು ನಿರ್ಣಯಿಸಲಾಗಿದೆ.
ದೇಶದಾದ್ಯಂತ 19 ರಾಜ್ಯಗಳ 47 ಆಸ್ಪತ್ರೆಗಳಲ್ಲಿ ನಡೆಸಿದ ಬಹುಕೇಂದ್ರಿತ ಪ್ರಕರಣ-ನಿಯಂತ್ರಣ ಅಧ್ಯಯನವು ಹಠಾತ್ ಸಾವುಗಳಿಗೆ ಲಸಿಕೆಯ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa