ಕರ್ನಾಟಕದಲ್ಲಿ ಸರ್ಕಾರ ಸತ್ತಿದ್ದು, ಮುಖ್ಯಮಂತ್ರಿ ಕೋಮಾದಲ್ಲಿದ್ದಾರೆ : ಬಿ. ಶ್ರೀರಾಮುಲು
ಬಳ್ಳಾರಿ, 17 ಜುಲೈ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‍ನ ಕೈಗೊಂಬೆಯಾಗಿದ್ದು, ಸರ್ಕಾರ ಸತ್ತಿದ್ದು, ಮುಖ್ಯಮಂತ್ರಿಗಳು ಕೋಮಾದಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ಅವರ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊ
ಕರ್ನಾಟಕದಲ್ಲಿ ಸರ್ಕಾರ ಸತ್ತಿದ್ದು, ಸಿಎಂ ಕೋಮಾದಲ್ಲಿದ್ದಾರೆ : ಬಿ. ಶ್ರೀರಾಮುಲು


ಕರ್ನಾಟಕದಲ್ಲಿ ಸರ್ಕಾರ ಸತ್ತಿದ್ದು, ಸಿಎಂ ಕೋಮಾದಲ್ಲಿದ್ದಾರೆ : ಬಿ. ಶ್ರೀರಾಮುಲು


ಕರ್ನಾಟಕದಲ್ಲಿ ಸರ್ಕಾರ ಸತ್ತಿದ್ದು, ಸಿಎಂ ಕೋಮಾದಲ್ಲಿದ್ದಾರೆ : ಬಿ. ಶ್ರೀರಾಮುಲು


ಬಳ್ಳಾರಿ, 17 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‍ನ ಕೈಗೊಂಬೆಯಾಗಿದ್ದು, ಸರ್ಕಾರ ಸತ್ತಿದ್ದು, ಮುಖ್ಯಮಂತ್ರಿಗಳು ಕೋಮಾದಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಟೀಕಿಸಿದ್ದಾರೆ.

ಅವರ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿ, ಕಾಂಗ್ರೆಸ್‍ನ ಕರ್ನಾಟಕ ಉಸ್ತುವಾರಿ ಸುರ್ಜಿತ್‍ವಾಲಾ ಅವರು 2-3ಬಾರಿ ಬೆಂಗಳೂರಿಗೆ ಬಂದು ಶಾಸಕರ ಮತ್ತು ಸಚಿವರ ಮೌಲ್ಯಾಂಕನ ಮಾಡಿರುವುದು ಜನವಿರೋಧಿ. ಕರ್ನಾಟಕದಲ್ಲಿ `ಮುಖ್ಯಮಂತ್ರಿ ಯಾರು’ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಸುರ್ಜಿವಾಲಾ ಅವರು ಕರ್ನಾಟಕ ಸರ್ಕಾರದ ಆಯುಷ್ಯವನ್ನು ನಿರ್ಧರಿಸಲಿದ್ದಾರೆ ಎಂದರು.

ಜುಲೈ 19 ರಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಶಕ್ತಿ ಪ್ರದರ್ಶನದ ನಂತರ ಅವರು ಜುಲೈ 30 ರಂದು ದೆಹಲಿಗೆ ವರಿಷ್ಠರನ್ನು ಭೇಟಿ ಮಾಡಲು ಹೊರಟಿದ್ದಾರೆ. ಇದು ಖಾಸಗಿ ಕಾರ್ಯಕ್ರಮ ಆಗಿದ್ದು, ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ. `ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ’ ಎನ್ನುವಂತಾಗಿದೆ ಎಂದು ಟೀಕಿಸಿದರು.

ಬಿಹಾರದ ಚುನಾವಣೆಯ ಹಿನ್ನಲೆಯಲ್ಲಿ ಓಬಿಸಿ ದಾಳವನ್ನು ಉರುಳಿಸಿರುವ ಕಾಂಗ್ರೆಸ್, ಬಿಹಾರದ ಚುನಾವಣೆಯ ನಂತರ ಮರೆತೇಬಿಡುತ್ತದೆ. ಸಿದ್ದರಾಮಯ್ಯ ಅವರು ಓಬಿಸಿಯ `ಹರಕೆಯ ಕುರಿ’ ಆಗಲಿದ್ದಾರೆ. ಬಳ್ಳಾರಿ ನಗರ - ಗ್ರಾಮೀಣದಲ್ಲಿ ಡ್ರಗ್ಸ್, ಗಾಂಜ, ಕೊಕೋನ್ ಸೇರಿ ಅನೇಕ ಮಾದಕಪದಾರ್ಥಗಳ ಮಾರಾಟ ವ್ಯಾಪಕವಾಗಿ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಕರ್ನಾಟಕದಲ್ಲಿ ದಿನೇಶ್ ಗುಂಡೂರಾವ್ ಅವರು ಸಂಪೂರ್ಣ ವಿಫಲರಾಗಿದ್ದು, ಆರೋಗ್ಯ ಅನಾರೋಗ್ಯವಾಗಿದೆ ಎಂದರು.

ಜನರು ಮೋಸಕ್ಕೆ ಹೆಚ್ಚು ಬೆಲೆ ನೀಡಿ, ಸತ್ಯಕ್ಕೆ ಬೆಲೆ ಕೊಡಲಿಲ್ಲ. ಕಾಂಗ್ರೆಸ್‍ಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಜನರು, ಈಗ, ಪಶ್ಚತ್ತಾಪಪಡುತ್ತಿದ್ದಾರೆ. ನನಗೂ, ಜಿ. ಜನಾರ್ದನರೆಡ್ಡಿಗೂ ಯಾವುದೇ ವೈಮನಸ್ಸಿಲ್ಲ. ಅರ್ಧಕಪ್ ಬಿಸಿ ನೀರಲ್ಲಿ, ನಾವೆಲ್ಲಾ ಸರಿಯಾಗುತ್ತೇವೆ. ಪಕ್ಷದ ವೇದಿಕೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತೇವೆ ಎಂದರು.

`ನನ್ನ ಬಿಟ್ಟು, ರಾಜ್ಯದಲ್ಲಿ ರಾಜಕೀಯ ಸಾಧ್ಯವಿಲ್ಲ’

ಕರ್ನಾಟಕದಲ್ಲಿ ನನ್ನನ್ನು ಬಿಟ್ಟು (ಬಿ. ಶ್ರೀರಾಮುಲು) ರಾಜಕೀಯ ನಡೆಸಲು ಸಾಧ್ಯವೇ ಇಲ್ಲ. ನನ್ನಿಂದ ಕನಿಷ್ಠ ಶೇ. 5 ರಷ್ಟು ಮತಗಳನ್ನು ಪಡೆಯುವ ಪ್ರಭಾವವಿದೆ. ಬಿ.ಎಂ. ಸಿದ್ದೇಶ್ ಸೇರಿ ಪಕ್ಷದ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಗ್ಗೂಡಬೇಕು ಎನ್ನುವ ಒಮ್ಮತದ ಅಭಿಪ್ರಾಯವಿದೆ. ನಾವೆಲ್ಲರೂ ಒಗ್ಗೂಡಿ, ಒಂದಾಗುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು - ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande