ಜವಳಗೇರಾ ಕರ್ನಾಟಕ ಪ್ರಬ್ಲಿಕ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ
ರಾಯಚೂರು, 17 ಜುಲೈ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ರಾಯಚೂರು ವತಿಯಿಂದ ಮಹಿಳೆಯರ ಶಿಕ್ಷಣದ ಮಹತ್ವ ಕುರಿತು ಕ
ಜವಳಗೇರಾ ಕರ್ನಾಟಕ ಪ್ರಬ್ಲಿಕ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ


ಜವಳಗೇರಾ ಕರ್ನಾಟಕ ಪ್ರಬ್ಲಿಕ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ


ರಾಯಚೂರು, 17 ಜುಲೈ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ರಾಯಚೂರು ವತಿಯಿಂದ ಮಹಿಳೆಯರ ಶಿಕ್ಷಣದ ಮಹತ್ವ ಕುರಿತು ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.

ಈ ವೇಳೆ ಮೀಷನ್ ಯೋಜನೆಯ ಜಿಲ್ಲಾ ಸಂಯೋಜಕರಾದ ಬಾವಸಲಿ ಅವರು ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೊ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜಿಸುವುದಾಗಿದೆ. ಹೆಣ್ಣು ಈ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಜೊತೆಗೆ ಯಾರೂ ಕೂಡ ಹೆಣ್ಣು ಗಂಡು ಎಂದು ಲಿಂಗ ತಾರತಮ್ಯ ಮಾಡದೆ ಹೆಣ್ಣನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಎಲ್ಲರೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಪೆÇ್ರೀತ್ಸಾಹಿಸಬೇಕು. ಸಾಮಾಜಿಕ ಪಿಡುಗುಗಳಾದ ,ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿ, ಹೆಣ್ಣು ಭ್ರೂಣಹತ್ಯೆ ಇಂತಹ ಅನಿಷ್ಠ ಪದ್ಧತಿಯನ್ನು ನಾವೆಲ್ಲರೂ ತೊಲಗಿಸಬೇಕು. ಇಂತಹ ಅನಿಷ್ಠ ಪದ್ಧತಿಗೆ ಪೆÇ್ರೀತ್ಸಾಹ ನೀಡುವವರ ವಿರುದ್ದ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎಂದರು.

ಹೆಣ್ಣು ಮಕ್ಕಳು ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದು ದೇಶದ ಉತ್ತಮ ನಾಗರೀಕರಾಗಬೇಕು. ಮಕ್ಕಳ ಏಳಿಗೆಗಾಗಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ-1098 ನ್ನು ಬಳಸಬಹುದು ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಗಂಗಾಧರ, ಸಹ ಶಿಕ್ಷಕರಾದ ಅನ್ನಮ್ಮ, ಸಹ ಮಕ್ಕಳ ಸಹಾಯವಾಣಿ ಅಧಿಕಾರಿ ಮುಕ್ಕಣ್ಣ ಸೇರಿದಂತೆ ಶಾಲೆಯ ವಿವಿಧ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande