ಚೈತನ್ಯ ಶಿಕ್ಷಣ ಸಂಸ್ಥೆಗಳ ರಾಧಾಕೃಷ್ಣ ಇನ್ನಿಲ್ಲ
ಬಳ್ಳಾರಿ, 17 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಚೈತನ್ಯ ಮತ್ತು ಪಿಆರ್ ಕೆ ಗ್ರೂಪ್ ಆಫ್ ಎಜ್ಯುಕೇಷನ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ. ಪಯ್ಯಾವುಲ ರಾಧಾಕೃಷ್ಣ (65) ಅವರು ಶ್ವಾಸಕೋಶದ ಸಮಸ್ಯೆಯ ಹಿನ್ನಲೆಯಲ್ಲಿ ಹೈದರಾಬಾದಿನ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಪತ್ನ
ಚೈತನ್ಯ ಶಿಕ್ಷಣ ಸಂಸ್ಥೆಗಳ ರಾಧಾಕೃಷ್ಣ ಇನ್ನಿಲ್ಲ


ಬಳ್ಳಾರಿ, 17 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಚೈತನ್ಯ ಮತ್ತು ಪಿಆರ್ ಕೆ ಗ್ರೂಪ್ ಆಫ್ ಎಜ್ಯುಕೇಷನ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ. ಪಯ್ಯಾವುಲ ರಾಧಾಕೃಷ್ಣ (65) ಅವರು ಶ್ವಾಸಕೋಶದ ಸಮಸ್ಯೆಯ ಹಿನ್ನಲೆಯಲ್ಲಿ ಹೈದರಾಬಾದಿನ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೃತರು ಪತ್ನಿ, ‌ಇಬ್ಬರು‌ ಗಂಡು ಮಕ್ಕಳು, ಸೊಸೆಯಂದಿರರು, ಮೊಮ್ಮಕ್ಕಳು, ಅಪಾರ ಸಂಖ್ಯೆಯ ಬಂಧುವರ್ಗ, ಆಪ್ತರು, ‌ಮಿತ್ರರು - ಅಭಿಮಾನಿಗಳನ್ನು ಅಗಲಿದ್ದಾರೆ.

ಮೃತರಿಗೆ ಶ್ವಾಸಕೋಶದ ಸಮಸ್ಯೆ ತೀವ್ರವಾಗಿದ್ದು, ಶ್ವಾಸಕೋಶವನ್ನು ಬದಲಾವಣೆ ಮಾಡಲಾಗಿತ್ತು. ಅಲ್ಲದೇ, ಕೆಲ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ಅಂತ್ಯಕ್ರಿಯೆಯು ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಳ್ಳಾರಿಯ ಹರಿಶ್ಚಂದ್ರ ಘಾಟ್ ನಲ್ಲಿ ನೆರವೇರಲಿದೆ.‌

ಮೃತರ ಆತ್ಮಕ್ಕೆ ಶಾಂತಿಕೋರಿ ಚೈತನ್ಯ ಹಾಗೂ ಪಿಆರ್ ಕೆ ಗ್ರೂಪ್ ನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande