ನಾಸಿಕ್‌ ದಿಂಡೋರಿ ಬಳಿ ಭೀಕರ ರಸ್ತೆ ಅಪಘಾತ : 7 ಮಂದಿ ಸ್ಥಳದಲ್ಲೇ ಸಾವು
ಮುಂಬಯಿ, 17 ಜುಲೈ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ವಾಣಿ-ನಾಸಿಕ್ ರಸ್ತೆ ಬಳಿ ಕಳೆದ ರಾತ್ರಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಏಳು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಮತ್ತು ಒಂದು ಮಗು ಸೇರ
Accident


ಮುಂಬಯಿ, 17 ಜುಲೈ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ವಾಣಿ-ನಾಸಿಕ್ ರಸ್ತೆ ಬಳಿ ಕಳೆದ ರಾತ್ರಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಏಳು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಮತ್ತು ಒಂದು ಮಗು ಸೇರಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ತಕ್ಷಣವೇ ನಾಸಿಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರಿಂದ ಲಭಿಸಿರುವ ಮಾಹಿತಿಯ ಪ್ರಕಾರ, ದಿಂಡೋರಿಯ ನಿವಾಸಿಗಳಾದ ಮೃತರು ಮಗನ ಹುಟ್ಟುಹಬ್ಬವನ್ನು ಆಚರಿಸಲು ಕಾರಿನಲ್ಲಿ ನಾಸಿಕ್ ನಗರಕ್ಕೆ ತೆರಳಿದ್ದರು. ಆಚರಣೆ ಮುಗಿಸಿ ಮನೆಗೆ ಮರಳುವ ಸಂದರ್ಭ ಕಾರು ಎದುರಿನಿಂದ ಬಂದ ಬೈಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಾರು ಮಗುಚಿ ರಸ್ತೆಯ ಬದಿಯ ಚರಂಡಿಗೆ ಬಿದ್ದು ಎಲ್ಲರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಮೃತಪಟ್ಟವರ ವಿವರ:

ದೇವಿದಾಸ್ ಪಂಡಿತ್ ಗಂಗುರ್ಡೆ (28), ಮನೀಷಾ ದೇವಿದಾಸ್ ಗಂಗುರ್ಡೆ (23), ಉತ್ತಮ್ ಏಕನಾಥ ಜಾಧವ್ (42), ಅಲ್ಕಾ ಉತ್ತಮ್ ಜಾಧವ್ (38), ದತ್ತಾತ್ರೇಯ ನಾಮದೇವ್ ವಾಘಮಾರೆ (45), ಅನುಸೂಯಾ ದತ್ತಾತ್ರೇಯ ವಾಘಮಾರೆ (40), ಒಂದು ಮಗು

ಗಾಯಾಳುಗಳು: ಮಂಗೇಶ್ ಯಶವಂತ ಕುರ್ಘಡೆ (25), ಅಜಯ್ ಜಗನ್ನಾಥ ಗೊಂಡ್ (18)

ದಿಂಡೋರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande