ಎಮ್‍ಸಿಹೆಚ್ ಆಸ್ಪತ್ರೆಯಲ್ಲಿ ಹಲವು ಚಿಕಿತ್ಸೆ ಲಭ್ಯ : ಡಿಎಚ್‍ಒ
ರಾಯಚೂರು, 17 ಜುಲೈ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಎಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಹಾಗೂ ಗರ್ಭಿಣಿಯರು ಮತ್ತು ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ವಿವಿಧ ಚಿಕಿತ್ಸೆಯು ಕಳೆದ 10 ತಿಂಗಳಿನಿಂದ ಪ್ರಾರಂಭವಾಗಿದ್ದು, ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಾ ಆ
ಎಮ್‍ಸಿಹೆಚ್ ಆಸ್ಪತ್ರೆಯಲ್ಲಿ ಹಲವು ಚಿಕಿತ್ಸೆ ಲಭ್ಯ : ಡಿಎಚ್‍ಒ


ರಾಯಚೂರು, 17 ಜುಲೈ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಎಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಹಾಗೂ ಗರ್ಭಿಣಿಯರು ಮತ್ತು ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ವಿವಿಧ ಚಿಕಿತ್ಸೆಯು ಕಳೆದ 10 ತಿಂಗಳಿನಿಂದ ಪ್ರಾರಂಭವಾಗಿದ್ದು, ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಆರ್.ಸಿ.ಹೆಚ್. ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 100 ಕ್ಕಿಂತ ಹೆಚ್ಚು ಸಾಧಾರಣ ಹೆರಿಗೆ ಹಾಗೂ ಸಿಜಿರಿಯನ್ ಹೆರಿಗೆಗಳು ಆಗುತ್ತಿದೆ. ಪ್ರತಿ ತಿಂಗಳು 9ನೇ ತಾರಿಕಿಗೆ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಮತ್ತು ಪ್ರತಿ ತಿಂಗಳು 24ನೇ ತಾರಿಕಿಗೆ ಇ.ಪಿ.ಎಮ್.ಎಸ್.ಎಮ್.ಎ ಕಾರ್ಯಕ್ರಮ ನಡೆಸಲಾಗುತ್ತದೆ.

ಗಂಢಾಂತರ ಗರ್ಭೀಣಿಯರಿಗೆ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳಿಗಾಗಿ ಎನ್.ಐ.ಸಿ.ಯು (ಮಕ್ಕಳ ತೀವ್ರನಿಗಾ ಘಟಕ)ದಲ್ಲಿ ಆರೋಗ್ಯದ ಆರೈಕೆ ಮಾಡಲಾಗುವುದು. ಇದರ ಜೊತೆಗೆ ಪ್ರಯೋಗಾಲಯ ಪರೀಕ್ಷೆ ಮತ್ತು ಸ್ಕ್ಯಾನಿಂಗ್ ಮಾಡಲಾಗುವುದು. ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಂಬಂಧಿಸಿದಂತೆ ಎಲ್ಲಾ ತರಹದ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

ಕುಟುಂಬ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಮಕ್ಕಳ ನಡುವಿನ ಅಂತರವನ್ನು ಕಾಪಾಡಲು ತಾತ್ಕಾಲಿಕ ವಿಧಾನಗಳಾದ ವಂಕಿ ಧಾರಣೆ, ಪಿ.ಪಿ.ಐ.ಯು.ಸಿ.ಡಿ ಅಳವಡಿಕೆ, ಪ್ರತಿ ಮೂರು ತಿಂಗಳಿಗೆ ಅಂತರ ಇಂಜೇಕ್ಷನ್, ದೈನಂದಿನ ಗರ್ಭನಿರೋಧಕ ನುಂಗುವ ಗುಳಿಗೆಗಳು, ಛಾಯಾ ಮಾತ್ರೆಗಳು ಹಾಗೂ ಶಾಶ್ವತವಾಗಿ ಮಕ್ಕಳು ಆಗದಂತೆ ತಡೆಯಲು ಟುಬ್ಯಾಕ್ಟಮಿ (ಸಂತಾನಹರಣ ಶಸ್ತ್ರ ಚಿಕಿತ್ಸೆ), ಲ್ಯಾಪ್ರೋಸ್ಕೋಪಿಕ್ (ಉದರದರ್ಶಕ ಶಸ್ತ್ರ ಚಿಕಿತ್ಸೆ) ಮಹಿಳೆಯರಿಗೆ ಸೌಲಭ್ಯವಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಆಪ್ತ ಸಮಾಲೋಚಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಕೊಳ್ಳಬಹುದು.

ಮಹಿಳೆಯರಿಗೆ ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆ, ಹಾಗೂ ಬಿಳಿ ಮುಟ್ಟಿಗೆ ಸಂಬಂಧಿಸಿದಂತೆ ಕಾಯಿಲೆಗಳ ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯಾಧಿಕಾರಿಗಳು ಲಭ್ಯವಿದ್ದು, ಮಕ್ಕಳಿಗೆ ಎಲ್ಲಾ ತರಹದ ಕಾಯಿಲೆಗೆ ಉಚಿತ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸುರೇಂದ್ರಬಾಬು ಹಾಗೂ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande