ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದು ಸರಿಯಲ್ಲ : ಹೆಬ್ಬಾಳಕರ್
ಬೆಂಗಳೂರು, 17 ಜುಲೈ (ಹಿ.ಸ.) : ಆ್ಯಂಕರ್ : ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದರ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ವಿಷಯದಲ್ಲಿ ನಾನು ಕಾಂಗ್ರೆಸ್, ಬಿಜೆಪಿ ಅಂತ ಮಾತನಾಡುವುದಿಲ್ಲ. ಪೀಠಕ್ಕೆ ಬೀಗ ಹಾಕಿದ್ದು ಸಭ್ಯತೆ ಅಲ್ಲ. ಇದನ್ನು ಖಂಡಿಸುತ್ತೇನ
Hebalkar


ಬೆಂಗಳೂರು, 17 ಜುಲೈ (ಹಿ.ಸ.) :

ಆ್ಯಂಕರ್ : ಕೂಡಲ ಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದರ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ವಿಷಯದಲ್ಲಿ ನಾನು ಕಾಂಗ್ರೆಸ್, ಬಿಜೆಪಿ ಅಂತ ಮಾತನಾಡುವುದಿಲ್ಲ. ಪೀಠಕ್ಕೆ ಬೀಗ ಹಾಕಿದ್ದು ಸಭ್ಯತೆ ಅಲ್ಲ. ಇದನ್ನು ಖಂಡಿಸುತ್ತೇನೆ. ನಾನು ಗುರುಗಳ ಸಂಪರ್ಕದಲ್ಲಿದ್ದೇನೆ. ಶ್ರೀಗಳು ನಾಡಿದ್ದು ಬೆಳಗಾವಿಗೆ ಬರುತ್ತಿದ್ದು, ಈ ಬಗ್ಗೆ ಗುರುಗಳ ಜೊತೆ ಮಾತನಾಡುತ್ತೇನೆ ಎಂದರು.

ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮಾತಿಗೆ ಬೆಲೆ ಕೊಡುವುದು ಬೇಡ. ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಲಕ್ಷ್ಮೀ ಹೆಬ್ಬಾಳಕರ್ ಏನು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಸರ್ಕಾರದಲ್ಲಿ ನಾವು ಏನು ಒತ್ತಡ ಹೇರುತ್ತಿದ್ದೇವೆ ಎಂದು ಬೆಲ್ಲದ್ ಅವರಿಗೆ ಗೊತ್ತಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande