ಅಮರನಾಥ ಯಾತ್ರೆ ವೇಳೆ ಭೂಕುಸಿತ; ಓರ್ವ ಮಹಿಳಾ ಯಾತ್ರಿ ಸಾವು,ಮೂವರಿಗೆ ಗಾಯ
ಶ್ರೀನಗರ, 17 ಜುಲೈ (ಹಿ.ಸ.) : ಆ್ಯಂಕರ್ : ಅಮರನಾಥ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಮೃತರಾಗಿದ್ದು, ಮೂವರು ಯಾತ್ರಿಕರು ಗಾಯಗೊಂಡಿದ್ದಾರೆ. ಗಂಡೇರ್‌ಬಾಲ್ ಜಿಲ್ಲೆಯ ಜಾಡ್-ಮೋದ್ ಬಳಿ ಈ ಭೂಕುಸಿತ ಸಂಭವಿಸಿದ್ದು, ಅನೇಕ ಯಾತ್ರಿಕರು ಕೊಚ್ಚಿ ಹೋ
Yatre


ಶ್ರೀನಗರ, 17 ಜುಲೈ (ಹಿ.ಸ.) :

ಆ್ಯಂಕರ್ : ಅಮರನಾಥ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮಹಿಳಾ ಯಾತ್ರಿಕರು ಮೃತರಾಗಿದ್ದು, ಮೂವರು ಯಾತ್ರಿಕರು ಗಾಯಗೊಂಡಿದ್ದಾರೆ. ಗಂಡೇರ್‌ಬಾಲ್ ಜಿಲ್ಲೆಯ ಜಾಡ್-ಮೋದ್ ಬಳಿ ಈ ಭೂಕುಸಿತ ಸಂಭವಿಸಿದ್ದು, ಅನೇಕ ಯಾತ್ರಿಕರು ಕೊಚ್ಚಿ ಹೋಗಿಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಘಟನೆಯ ನಂತರ ಗಾಯಾಳುಗಳನ್ನು ತಕ್ಷಣವೇ ಬಾಲ್ಟಾಲ್ ಬೇಸ್ ಕ್ಯಾಂಪ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆಗಾಗಿ ತೆರಳುವ ಮಾರ್ಗ ಮಧ್ಯೆ ಓರ್ವ ಮಹಿಳಾ ಯಾತ್ರಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಅವರನ್ನು ರಾಜಸ್ಥಾನ ಮೂಲದ ಸೋನಾ ಬಾಯಿ ಎಂದು ಗುರುತಿಸಲಾಗಿದೆ.

ಭದ್ರತಾ ದೃಷ್ಟಿಯಿಂದಾಗಿ ಹಾಗೂ ನಿರಂತರ ಭಾರೀ ಮಳೆಯ ಕಾರಣದಿಂದಾಗಿ ಇಂದು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಮ್ಮುವಿನಿಂದ ಹೊಸ ಯಾತ್ರಿಕರನ್ನು ಪವಿತ್ರ ಗುಹೆ ಕಡೆಗೆ ತೆರಳುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಪರಿಸ್ಥಿತಿ ಮೇಲ್ವಿಚಾರಣೆಗೆ ಅಧಿಕಾರಿಗಳು ಸಜ್ಜಾಗಿದ್ದು, ನಿರಂತರ ಮಳೆಯ ಹಿನ್ನೆಲೆಯಲ್ಲಿ ಇನ್ನೂ ಭೂಕುಸಿತಗಳ ಸಂಭವವನ್ನು ನಿರ್ಲಕ್ಷಿಸಲಾಗದು ಎಂದು ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande