ಗಂಗಾವತಿ, 17 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು ಪ್ರಶಾಂತಿ (2) ಮಗು ಮೃತಪಟ್ಟಿದ್ದು ಮನೆಯಲ್ಲಿ ಹಲವರಿಗೆ ತೀವ್ರ ಗಾಯವಾದ ಘಟನೆ ಜು.17 ರ ಗುರುವಾರ ಮುಂಜಾನೆ ನಡೆದಿದೆ.
ಗಾಯಗೊಂಡವರು ಮಗುವಿನ ತಾಯಿ ಹನುಮಂತಿ (28),ಕುಟುಂಬ ಸದಸ್ಯರಾದ ದುರಗಮ್ಮ(65), ಭೀಮಮ್ಮ (19), ಹುಸೇನಪ್ಪ (46), ಫಕೀರಪ್ಪ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹಾಗೂ ತಹಶೀಲ್ದಾರ್ ಯು.ನಾಗರಾಜ್, ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಗಂಗಾವತಿ ಗ್ರಾಮೀಣ ಪೆÇಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್