ಓಪೆಕ್ ಆಸ್ಪತ್ರೆಯಲ್ಲಿ ನಾನಾ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ರಾಯಚೂರು, 17 ಜುಲೈ (ಹಿ.ಸ.) : ಆ್ಯಂಕರ್ : ರಾಯಚೂರು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಓಪೆಕ್) ಯಲ್ಲಿ ನಾನಾ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸ್ಪತ್ರೆಯಲ್
ಓಪೆಕ್ ಆಸ್ಪತ್ರೆಯಲ್ಲಿ ನಾನಾ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ


ರಾಯಚೂರು, 17 ಜುಲೈ (ಹಿ.ಸ.) :

ಆ್ಯಂಕರ್ : ರಾಯಚೂರು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಓಪೆಕ್) ಯಲ್ಲಿ ನಾನಾ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸ್ಪತ್ರೆಯಲ್ಲಿ ಅರ್ಹ 40 ಶುಶ್ರೂಷಕ ಅಧಿಕಾರಿಗಳು ಹುದ್ದೆಗೆ ಬಿಎಸ್‍ಸಿ ಇನ್ ನರ್ಸಿಗ್, 06 ಓಟಿ ತಂತ್ರಜ್ಞರ ಹುದ್ದೆಗೆ ಡಿಪ್ಲೋಮಾ ಇನ್ ಅಪರೇಶನ್ ಥಿಯೇಟರ್ ಐಂಡ್ ಅನಸ್ಥೇಷಿಯ ಟೆಕ್ನೋಲಜಿ, 01 ಗ್ಯಾಸ್ಟ್ರೋ ತಂತ್ರಜ್ಞರ ಹುದ್ದೆಗೆ ಡಿಪ್ಲೋಮಾ ಇನ್ ಎಂಡೊಸ್ಕೋಪಿ ಟೆಕ್ನೋಲಜಿ, 02 ಸಿ.ಟಿ.ತಂತ್ರಜ್ಞರ ಹುದ್ದೆ ಬಿಎಸ್‍ಸಿ ರೇಡಿಯಾಲಜಿ/ 50 ಹಾಸಿಗೆಗಳ ಆಸ್ಪತ್ರೆಯಲ್ಲಿ 2 ವರ್ಷಗಳ ಅನುಭವದೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಸಿಟಿ/ಎಂಆರ್‍ಐ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಹೊಂದಿರಬೇಕು. 02 ಕ್ಷ-ಕಿರಣ ತಂತ್ರಜ್ಞರ ಹುದ್ದೆಗೆ ವೈದ್ಯಕೀಯ ಎಕ್ಸ್-ರೇ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು.

02 ಫಾರ್ಮಸಿಸ್ಟ್ ಹುದ್ದೆಗೆ ಡಿ.ಫಾರ್ಮಾ/ ಬಿ.ಫಾರ್ಮಾ ಹೊಂದಿರಬೇಕು. 01 ಸಿಸ್ಟಮ್ ಎಂಜಿನೀಯರ್ ಹುದ್ದೆಗೆ ಎಮ್‍ಸಿಎ/ ಬಿಸಿಎಯಲ್ಲಿ 2 ವರ್ಷಗಳ ಅನುಭವ ಹೊಂದಿಬೇಕು. 01 ಬಯೋಮೆಡಿಕಲ್ ಎಂಜಿನಿಯರ್ ಹುದ್ದೆಗೆ ಭಾರತದ ಕಾನೂನಿನಿಂದ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಎಲೆಕ್ಟ್ರಾನಿಕ್ಸ್/ ಬಯೋಮೆಡಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ (ಬಿಇ) ಮತ್ತು 2 ವರ್ಷಗಳ ಅನುಭವ ಹೊಂದಿರಬೇಕು. 05 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಪಿಯುಸಿ, ಕಿಯೋನಿಕ್ಸ್‍ನಲ್ಲಿ ಟೈಪಿಂಗ್ ಮತ್ತು ಕಂಪ್ಯೂಟರ್ ಕೌಶಲ್ಯ ಹೊಂದಿರಬೇಕು.

30 ಗ್ರೂಪ್-ಡಿ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಜುಲೈ 31ರ ಸಂಜೆ 4 ಗಂಟೆಯೊಳಗಾಗಿ ವೆಬ್‍ಸೈಟ್ ವಿಳಾಸ: www.rimsraichur.karnataka.gov.in ನಲ್ಲಿ ಅರ್ಜಿ ಫಾರ್ಮ ಡೌನ್‍ಲೋಡ್ ಭರ್ತಿ ಮಾಡಿ ಅಗತ್ಯ ದಾಖೆಲೆಗಳೊಂದಿಗೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷಾಧಿಕಾರಿಗಳ ಹೆಸರಿಗೆ ತಲುಪುವಂತೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಲಕೋಟೆ ಮೇಲೆ ದಪ್ಪ ಅಕ್ಷರದಲ್ಲಿ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ರಾಯಚೂರು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande