ಚುನಾವಣೆಗೆ ಮುನ್ನ ನಿತೀಶ್ ಸರ್ಕಾರದಿಂದ ಬಿಹಾರದ ಜನತೆಗೆ ಉಡುಗೊರೆ
ಪಾಟ್ನಾ, 17 ಜುಲೈ (ಹಿ.ಸ.) : ಆ್ಯಂಕರ್ : ಚುನಾವಣೆಗೆ ಮುನ್ನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ 1.67 ಕೋಟಿ ಗೃಹಬಳಕೆದಾರರಿಗೆ ಉಡುಗೊರೆಯಾಗಿ 125 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ಈ ಹೊಸ ಯೋಜನೆಯು 2025ರ ಆಗಸ್ಟ್ 1 ರಿಂದ, ಅಂದರೆ ಜುಲೈ ತಿಂಗಳ ವಿದ್ಯುತ್ ಬಿಲ
Nitesh


ಪಾಟ್ನಾ, 17 ಜುಲೈ (ಹಿ.ಸ.) :

ಆ್ಯಂಕರ್ : ಚುನಾವಣೆಗೆ ಮುನ್ನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ 1.67 ಕೋಟಿ ಗೃಹಬಳಕೆದಾರರಿಗೆ ಉಡುಗೊರೆಯಾಗಿ 125 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ಈ ಹೊಸ ಯೋಜನೆಯು 2025ರ ಆಗಸ್ಟ್ 1 ರಿಂದ, ಅಂದರೆ ಜುಲೈ ತಿಂಗಳ ವಿದ್ಯುತ್ ಬಿಲ್ಲಿನಿಂದ ಜಾರಿಗೆ ಬರಲಿದೆ.

ಮುಖ್ಯಮಂತ್ರಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಘೋಷಣೆ ಮಾಡಿ, “ನಾವು ಎಲ್ಲರಿಗೆ ಅಗ್ಗದ ದರದಲ್ಲಿ ವಿದ್ಯುತ್ ಒದಗಿಸಲು ಬದ್ಧರಾಗಿದ್ದೇವೆ. ಈಗ ಈ ಉಚಿತ ವಿದ್ಯುತ್ ಯೋಜನೆಯ ಮೂಲಕ ಜನರಿಗೆ ನೇರ ಸಹಾಯ ನೀಡುತ್ತಿದ್ದೇವೆ. ಈ ಮೂಲಕ ರಾಜ್ಯದ ಸುಮಾರು 1 ಕೋಟಿ 67 ಲಕ್ಷ ಕುಟುಂಬಗಳು ಲಾಭ ಪಡೆಯಲಿವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಗೃಹಬಳಕೆದಾರರ ಮನೆಗಳ ಛಾವಣಿಗಳಲ್ಲಿ ಅಥವಾ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನೂ ಸರ್ಕಾರ ಮುಂದಿಟ್ಟಿದೆ. ಕುಟೀರ ಜ್ಯೋತಿ ಯೋಜನೆ ಅಡಿಯಲ್ಲಿ ಅತ್ಯಂತ ಬಡ ಕುಟುಂಬಗಳಿಗೆ ಸಂಪೂರ್ಣ ಉಚಿತವಾಗಿ ಸೌರ ಘಟಕಗಳನ್ನು ನೀಡಲಾಗುತ್ತದೆ. ಇತರರಿಗೆ ಸಹಾಯಧನದ ಮೂಲಕ ಪ್ರೋತ್ಸಾಹ ನೀಡಲಾಗುವುದು‌ ಎಂದು ತಿಳಿಸಿದ್ದಾರೆ.

ಈ ಯೋಜನೆಯೊಂದಿಗೆ ಬಿಹಾರದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,000 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದನೆ ಸಾಧ್ಯವಾಗಲಿದೆ. ಇದರ ಮೂಲಕ ರಾಜ್ಯವು ಸ್ವಾವಲಂಬಿ ಶಕ್ತಿ ಉತ್ಪಾದನೆಯತ್ತ ಹೆಜ್ಜೆ ಇಡಲಿದೆ ಮತ್ತು ಜನರ ವಿದ್ಯುತ್ ವೆಚ್ಚದ ಭಾರವನ್ನು ಕಡಿಮೆ ಮಾಡಲಿದೆ ನಿತೀಶ್ ಕುಮಾರ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande