ಯುವಶಕ್ತಿ ದೇಶ ಮತ್ತು ಸಮಾಜ ಸೇವೆಗೆ ಸದಾ ಸಿದ್ಧರಿರಬೇಕು : ಮಾಜಿ ಸೈನಿಕ ಪ್ರಹ್ಲಾದ ರೆಡ್ಡಿ
ಬಳ್ಳಾರಿ, 16 ಜುಲೈ (ಹಿ.ಸ.) : ಆ್ಯಂಕರ್ : ಯುವಶಕ್ತಿ ದೇಶ ಮತ್ತು ಸಮಾಜ ಸೇವೆಗಾಗಿ ಸದಾಕಾಲ ಸಿದ್ದವಾಗಿರಬೇಕು ಎಂದು ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಹ್ಲಾದರೆಡ್ಡಿ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಇನ್ನರ್‍ವ್ಹೀಲ್ - ಎಂಜಿಎಂ ಶಾಲೆಯ ಜಂಟಿ ಆಶ್ರಯ
ಯುವಶಕ್ತಿ ದೇಶ ಮತ್ತು ಸಮಾಜ ಸೇವೆಗೆ ಸದಾ ಸಿದ್ಧರಿರಬೇಕು  : ಮಾಜಿ ಸೈನಿಕ ಪ್ರಹ್ಲಾದ ರೆಡ್ಡಿ


ಯುವಶಕ್ತಿ ದೇಶ ಮತ್ತು ಸಮಾಜ ಸೇವೆಗೆ ಸದಾ ಸಿದ್ಧರಿರಬೇಕು  : ಮಾಜಿ ಸೈನಿಕ ಪ್ರಹ್ಲಾದ ರೆಡ್ಡಿ


ಬಳ್ಳಾರಿ, 16 ಜುಲೈ (ಹಿ.ಸ.) :

ಆ್ಯಂಕರ್ : ಯುವಶಕ್ತಿ ದೇಶ ಮತ್ತು ಸಮಾಜ ಸೇವೆಗಾಗಿ ಸದಾಕಾಲ ಸಿದ್ದವಾಗಿರಬೇಕು ಎಂದು ಕರ್ನಾಟಕ ಮಾಜಿ ಅರೇ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಹ್ಲಾದರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಇನ್ನರ್‍ವ್ಹೀಲ್ - ಎಂಜಿಎಂ ಶಾಲೆಯ ಜಂಟಿ ಆಶ್ರಯದಲ್ಲಿ ಸೈನ್ಯ, ಅರೆ ಸೈನ್ಯದ ಕುರಿತು ನಡೆದ ಉಪನ್ಯಾಸ ಶಿಬಿರದಲ್ಲಿ ಮಾತನಾಡಿದ ಬಿ.ಎನ್. ಪ್ರಹ್ಲಾದರೆಡ್ಡಿ ಅವರು, ಸೈನ್ಯದ ಕಾರ್ಯ, ಜವಾಬ್ದಾರಿಗಳು, ಕರ್ತವ್ಯ-ಸವಾಲುಗಳು - ಆಹಾರ ಇನ್ನಿತರೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಬಳ್ಳಾರಿ ಜಿಲ್ಲೆಯ ಗೃಹ ರಕ್ಷಕ ದಳದ ಕಮಾಂಡೆಂಟ್ ಶೇಕ್‍ಸಾಬ್, ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಉಪಾಧ್ಯಕ್ಷ ಈಶ್ವರರೆಡ್ಡಿ, ನಿರ್ದೇಶಕರಾದ ಲಕ್ಷ್ಮಣ್ ಮತ್ತು ಎಂ.ಆರ್. ರೆಡ್ಡಿ ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande