ರೈಲುಗಳ ಸಂಚಾರ ಭಾಗಶಃ ರದ್ದು
ಬೆಂಗಳೂರು, 16 ಜುಲೈ (ಹಿ.ಸ.) : ಆ್ಯಂಕರ್ : ಉತ್ತರ ರೈಲ್ವೆಯ ದೆಹಲಿ ಸರಾಯ್ ರೋಹಿಲ್ಲಾ ನಿಲ್ದಾಣದಲ್ಲಿ ಹೊಸ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ಯಾನೆಲ್ ಅಳವಡಿಕೆ ಮತ್ತು ಕಾರ್ಯಾರಂಭದ ಹಿನ್ನೆಲೆಯಲ್ಲಿ, ಕೆಲ ರೈಲು ಸೇವೆಗಳನ್ನು ನೈಋತ್ಯ ರೇಲ್ವೆ ಭಾಗಶಃ ರದ್ದುಗೊಳಿಸಿದೆ. ಜುಲೈ 19 ಮತ್ತು 26, 2025 ರಂ
Train


ಬೆಂಗಳೂರು, 16 ಜುಲೈ (ಹಿ.ಸ.) :

ಆ್ಯಂಕರ್ : ಉತ್ತರ ರೈಲ್ವೆಯ ದೆಹಲಿ ಸರಾಯ್ ರೋಹಿಲ್ಲಾ ನಿಲ್ದಾಣದಲ್ಲಿ ಹೊಸ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಪ್ಯಾನೆಲ್ ಅಳವಡಿಕೆ ಮತ್ತು ಕಾರ್ಯಾರಂಭದ ಹಿನ್ನೆಲೆಯಲ್ಲಿ, ಕೆಲ ರೈಲು ಸೇವೆಗಳನ್ನು ನೈಋತ್ಯ ರೇಲ್ವೆ ಭಾಗಶಃ ರದ್ದುಗೊಳಿಸಿದೆ.

ಜುಲೈ 19 ಮತ್ತು 26, 2025 ರಂದು ಹೊರಡುವ ರೈಲು ಸಂಖ್ಯೆ 12213 ಯಶವಂತಪುರ – ದೆಹಲಿ ಸರಾಯ್ ರೋಹಿಲ್ಲಾ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು, ದೆಹಲಿ ಸರಾಯ್ ರೋಹಿಲ್ಲಾ ಬದಲಿಗೆ ಹಜರತ್ ನಿಜಾಮುದ್ದೀನ್’ನಲ್ಲಿ ಕೊನೆಗೊಳ್ಳುತ್ತದೆ. ಇದು ಹಜರತ್ ನಿಜಾಮುದ್ದೀನ್ ಮತ್ತು ದೆಹಲಿ ಸರಾಯ್ ರೋಹಿಲ್ಲಾ ನಡುವೆ ಭಾಗಶಃ ರದ್ದುಗೊಂಡಿರುತ್ತದೆ. ಅದೇ ರೀತಿ, ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ – ಯಶವಂತಪುರ ಸಾಪ್ತಾಹಿಕ ಎಕ್ಸ್’ಪ್ರೆಸ್, ಜುಲೈ 21 ಮತ್ತು 28, 2025 ರಂದು ಪ್ರಾರಂಭವಾಗುವ ಪ್ರಯಾಣವು ದೆಹಲಿ ಸರಾಯ್ ರೋಹಿಲ್ಲಾ ಬದಲಿಗೆ ಹಜರತ್ ನಿಜಾಮುದ್ದೀನ್’ನಿಂದ ಪ್ರಾರಂಭವಾಗುತ್ತದೆ. ಇದು ದೆಹಲಿ ಸರಾಯ್ ರೋಹಿಲ್ಲಾ ಮತ್ತು ಹಜರತ್ ನಿಜಾಮುದ್ದೀನ್ ನಡುವೆ ಭಾಗಶಃ ರದ್ದುಗೊಂಡಿರುತ್ತದೆ ಎಂದು ನೈಋತ್ಯ ರೇಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande