ಬಳ್ಳಾರಿ, 16 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಬಸಮ್ಮ ಶಾಲೆಯಲ್ಲಿ ಸಂಸತ್ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಅತ್ಯಂತ ಶ್ರದ್ಧೆ ಮತ್ತು ಬದ್ಧತೆಯಿಂದ ಬುಧವಾರ ನಡೆದ ಮತದಾನದಲ್ಲಿ ಭಾಗವಹಿಸಿ ಶಾಲಾ ಸಂಸತ್ತನ್ನು ರಚಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಚಂದನಗೌಡ ಅವರು, ಶಾಲೆಯಲ್ಲಿ ಮಕ್ಕಳಿಗಾಗಿ ಮಕ್ಕಳಿಂದ ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಿದ್ದು, 19 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. 06 ವಿದ್ಯಾರ್ಥಿಗಳು ಮತದಾನದಲ್ಲಿ ಆಯ್ಕೆಯಾಗಿದ್ದು, 264 ಮತದಾರರು ಮತ ಚಲಾವಣೆ ಮಾಡಿದ್ದಾರೆ.
ಶಾಲಾ ಪ್ರಧಾನ ಕಾರ್ಯದರ್ಶಿಗಳಾಗಿ ಹರಿಕಾ (55 ಮತಗಳು) ಮಣಿಲಕ್ಷ್ಮಿ (28 ಮತಗಳು), ಕ್ರೀಡಾ ಕಾರ್ಯದರ್ಶಿಗಳಾಗಿ ಹೆಚ್. ಯೋಗೀಶ್ (31 ಮತಗಳು) ರುಬಿನಾ ಸಿದ್ದೀಕ್ (44 ಮತಗಳು),
ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಮೋಯಿಜಾ ಮಿನಾಜ್ (45 ಮತಗಳು) ಮತ್ತು ಲಿಖಿತಾ (41 ಮತಗಳನ್ನು) ಪಡೆದು ಗೆಲುವು ಸಾಧಿಸಿದ್ದಾರೆ.
ಮುಖ್ಯ ಶಿಕ್ಷಕ ಚೆನ್ನನಗೌಡ ಅವರು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಗುರುತಿಸಿ - ಪ್ರೋತ್ಸಾಹಿಸಿ ಬೆಳೆಸಲು
ಶಾಲಾ ಸಂಸತ್ತಿನ ಚುನಾವಣೆ ಪೂರಕ ಎಂದರು.
ದೈಹಿಕ ಶಿಕ್ಷಕ ಬಿ.ಹೆಚ್.ಎಂ. ವಿರೂಪಾಕ್ಷಯ್ಯ, ಸಹ ಶಿಕ್ಷಕರಾದ ಡಿ.ಜಿ. ಶೇಖರಗೌಡ, ಶಶಿಧರಯ್ಯ, ಟಿ. ಮಾರುತಿ,
ಗಂಗಾಧರಯ್ಯ ಶಾಸ್ತ್ರಿ. ಎನ್, ಕಾರ್ತಿಕ್, ವಿ. ಜಯಲಕ್ಷ್ಮಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್