ಜು.೧೯ಕ್ಕೆ ಮೈಸೂರಿನಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಬೆಂಗಳೂರು, 16 ಜುಲೈ (ಹಿ.ಸ.) : ಆ್ಯಂಕರ್ : ಸಿದ್ದರಾಮಯ್ಯ ತಮ್ಮ ತವರು ಮೈಸೂರಿನಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಆಯೋಜನೆಗೊಂಡಿದ್ದು, ಜಿಲ್ಲೆಗಳಿಂದ ಲಕ್ಷಾಂತರ ಜನ ಸೇರಿಸಲು ತಯಾರಿ ನಡೆಸಿದ್ದಾರೆ. ಪ್ರತಿ
Cm


ಬೆಂಗಳೂರು, 16 ಜುಲೈ (ಹಿ.ಸ.) :

ಆ್ಯಂಕರ್ : ಸಿದ್ದರಾಮಯ್ಯ ತಮ್ಮ ತವರು ಮೈಸೂರಿನಲ್ಲಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾಧನಾ ಸಮಾವೇಶ ಆಯೋಜನೆಗೊಂಡಿದ್ದು, ಜಿಲ್ಲೆಗಳಿಂದ ಲಕ್ಷಾಂತರ ಜನ ಸೇರಿಸಲು ತಯಾರಿ ನಡೆಸಿದ್ದಾರೆ.

ಪ್ರತಿ ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಠ 6,000 ರಿಂದ 8,000 ಜನರನ್ನೂ ಸಮಾವೇಶಕ್ಕೆ ತರಲು ಶಾಸಕರಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಹಳೆಯ ಮೈಸೂರು ಪ್ರದೇಶದಲ್ಲಿ ತಮ್ಮ ಮೇಲುಗೈ ತೋರಿಸಲು ಸಿದ್ದರಾಮಯ್ಯ ಮುಂಂದಾಗಿದ್ದಾರೆ.

ಸಮಾವೇಶದ ಅಂಗವಾಗಿ ಸುಮಾರು ₹2,600 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆ ನಡೆಯಲಿದೆ. ಕಾರ್ಯಕ್ರಮದ ಪೂರ್ಣ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಆಪ್ತರಾಗಿರುವ ಸಚಿವ ಡಾ. ಮಹದೇವಪ್ಪ ಅವರಿಗೆ ವಹಿಸಲಾಗಿದೆ.

ರಾಜಕೀಯ ಹಿನ್ನೆಲೆ : ಈ ಸಮಾವೇಶವನ್ನು ರಾಜ್ಯದ ದಕ್ಷಿಣ ಭಾಗದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವವನ್ನು ಮತ್ತಷ್ಟು ಬಲಪಡಿಸಲು, ಮತ್ತು ಕಾಂಗ್ರೆಸ್ ಒಳ ಸಂಘರ್ಷದ ನಡುವೆಯೂ ತಮ್ಮ ನಾಯಕತ್ವವನ್ನು ಸ್ಪಷ್ಟಪಡಿಸಲು ನಡೆಯುವ ನಿರ್ಣಾಯಕ ಕಾರ್ಯಕ್ರಮವೆಂದು ವಿಶ್ಲೇಷಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande