2025-26 ನೇ ಸಾಲಿಗೆ ಮುಂಗಾರಿನ ವಿವಿಧ ಬೆಳೆಗಳಲ್ಲಿ ಕೀಟ ರೋಗ ನಿರ್ವಹಣೆ
ಗದಗ, 16 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ದಿ:01.06.2025 ರಿಂದ ದಿ:15.07.2025 ವರೆಗೆ119.00 ಮಿ.ಮೀ.ಮಳೆಗೆ 96.30 ಮಿ.ಮೀ. ಆಗಿದ್ದು, ವಾಡಿಕೆಗಿಂತ ಶೇ.19 ಕಡಿಮೆ ಆಗಿರುತ್ತದೆ. ಪೂರ್ವ ಮುಂಗಾರು ಮಳೆಯು ಚೆನ್ನಾಗಿ ಆಗಿದ್ದರಿಂದ, 306185 ಹೆ.ಬಿತ್ತನೆ ಗುರಿಗೆ 303831
ಪೋಟೋ


ಗದಗ, 16 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ದಿ:01.06.2025 ರಿಂದ ದಿ:15.07.2025 ವರೆಗೆ119.00 ಮಿ.ಮೀ.ಮಳೆಗೆ 96.30 ಮಿ.ಮೀ. ಆಗಿದ್ದು, ವಾಡಿಕೆಗಿಂತ ಶೇ.19 ಕಡಿಮೆ ಆಗಿರುತ್ತದೆ. ಪೂರ್ವ ಮುಂಗಾರು ಮಳೆಯು ಚೆನ್ನಾಗಿ ಆಗಿದ್ದರಿಂದ, 306185 ಹೆ.ಬಿತ್ತನೆ ಗುರಿಗೆ 303831 ಹೆ.ಶೇ.99.23 ರಷ್ಟು ಬಿತ್ತನೆ ಆಗಿರುತ್ತದೆ. ಹೆಸರು 125956 ಹೆ., ಗೋವಿನ ಜೋಳ 142741 ಹೆ., ಹಾಗೂ 14505 ಹೆ.ಗಳಷ್ಟು ಶೇಂಗಾ ಬೆಳೆಯನ್ನು ಬಿತ್ತಲಾಗಿದೆ.

ಹವಾಮಾನ ಮುನ್ಸೂಚನೆಯ ಪ್ರಕಾರ, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ.ನೀರಾವರಿ ಸೌಲಭ್ಯ ಹೊಂದಿರುವರೈತರು, ಈಗಾಗಲೇ ಬಿತ್ತಿದ ಬೆಳೆಗೆ ಅಗತ್ಯಕ್ಕೆ ತಕ್ಕಂತೆ ನೀರು ಕೊಡಬೇಕು. ಬೆಳೆಗಳಿಗೆ ತೇವಾಂಶ ಕಾಪಾಡಲು ಎಡೆಕುಂಟೆ ಹಾಯಿಸಬೇಕು.

ಹೆಸರು ಬೆಳೆಯು 45-50 ದಿನಗಳ ಬೆಳವಣಿಗೆ ಹಂತದಿAದ ಕಾಯಿಕಟ್ಟುವ ಹಂತದಲ್ಲಿದ್ದು,ರಸ ಹೀರುವಕೀಟಗಳನ್ನು ನಿಯಂತ್ರಿಸಲು, 1 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50% ಇ.ಸಿ.ಅಥವಾ 1.75 ಮಿ.ಲೀ. ಡೈಮಿಥೋಯೇಟ್ 30% ಇ.ಸಿ.ಯನ್ನುಒಂದು ಲೀಟರ್ ನೀರಿನಲ್ಲಿಕರಗಿಸಿ ಸಿಂಪಡಿಸಬೇಕು. ಬೂದಿ ರೋಗವನ್ನು ನಿಯಂತ್ರಿಸಲು, ಒಂದು ಲೀಟರ್ ನೀರಿನಲ್ಲಿ 1 ಮಿ.ಲೀ. ಹೆಕ್ಸಾಕೊನಜೋಲ್ 5% ಇ.ಸಿ.ಯನ್ನು ಕರಗಿಸಿ ಸಿಂಪಡಿಸಬೇಕು. ನಂಜಾಣು ರೋಗ ಬಾಧಿತಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ ಪ್ರತಿ ಲೀಟರ್ ನೀರಿನಲ್ಲಿ 0.5 ಮಿ.ಲೀ.ಇಮಿಡಾಕ್ಲೋಪ್ರಿಡ್ ಮತ್ತು ಲಘು ಪೋಷಕಾಂಶ ಪೂರೈಸುವ ರಸಗೊಬ್ಬರವನ್ನು ಬೆರೆಸಿ ಸಿಂಪಡಿಸಬೇಕು.

ತೊಗರಿ ಬೆಳೆಯು 40-50 ದಿನಗಳ ಬೆಳವಣಿಗೆ ಹಂತದಲ್ಲಿದ್ದು, ಅಂತರ ಬೇಸಾಯ ಮಾಡಿ, ಕೈಕಳೆತೆಗೆದು, ಮೇಲುಗೊಬ್ಬರವನ್ನುಕೊಡಬೇಕು. ಬೂದುದುಂಬಿಯ ನಿಯಂತ್ರಣಕ್ಕಾಗಿ ಪ್ರತಿ ಲೀಟರ ನೀರಿನಲ್ಲಿ 2 ಮಿ.ಲೀ. ಕ್ವಿನಾಲ್‌ಫಾಸ್ ಬೆರೆಸಿಸಿಂಪಡಿಸಬೇಕು.ನೆಟೆರೋಪೀಡಿತಗಿಡಗಳನ್ನುಕಿತ್ತು ನಾಶಮಾಡಬೇಕು.ಜೋಳಅಥವಾ ಮುಸುಕಿನಜೋಳ ಮತ್ತುತೊಗರಿ ಮಿಶ್ರ, ಅಂತರ ಬೆಳೆಯಲ್ಲಿ ಸೊರಗುರೋಗ ಬಾಧೆಕಡಿಮೆ.ರೋಗ ಬಂದಗಿಡಗಳನ್ನುಕಿತ್ತು ನಾಶಮಾಡಬೇಕು. ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕತೊಗರಿ ಮತ್ತುಕೂಳೆತೊಗರಿ ಬೆಳೆಯನ್ನುಕಿತ್ತು ನಾಶಮಾಡಬೇಕು. ನುಶಿ ನಾಶಕಗಳಾದ 2.5 ಮಿ. ಲೀ.ಡಿಕೋಫಾಲ್18.5ಇ.ಸಿ. ಅಥವಾ 1.5 ಮಿ. ಲೀ.ಆಕ್ಸಿಡೆಮಟಾನ್ ಮಿಥೈಲ್ 50 ಇ. ಸಿ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.ಎಲೆಚುಕ್ಕೆರೋಗಕ್ಕೆಪ್ರತಿಕಿ.ಗ್ರಾಂ.ಬೀಜಕ್ಕೆ 2 ಗ್ರಾಂ.ಕ್ಯಾಪ್ಟಾನ್ 80 ಡಬ್ಲೂ.ಪಿ.ಅಥವಾಥೈರಾಮ್ 75 ಡಬ್ಲೂ.ಪಿ.ದಿಂದ ಬೀಜೋಪಚಾರ ಮಾಡಬೇಕು.ಒಂದುಗ್ರಾಂಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿರೋಗದ ಲಕ್ಷಣಕಂಡಕೂಡಲೆ ಸಿಂಪಡಿಸಬೇಕು ಹಾಗೂ 10-15 ದಿವಸಗಳ ನಂತರ ಎರಡನೆಸಿ ಪರಣೆತೆಗೆದುಕೊಳ್ಳಬೇಕು.

ಮೆಕ್ಕೆಜೋಳವು 40-50 ದಿನಗಳ ಬೆಳವಣಿಗೆ ಹಂತದಲ್ಲಿದ್ದು, ಕಾಂಡಕೊರಕ ನಿಯಂತ್ರಣಕ್ಕೆ ಪ್ರತಿ ಎಕರೆಗೆ 3.0 ಕಿ. ಗ್ರಾಂಶೇ.3ರಕಾರ್ಬೊಫ್ಯೂರಾನ್ ಹರಳುಗಳನ್ನುಎಲೆಯ ಸುಳಿಯಲ್ಲಿ ಹಾಕಬೇಕು. ಕೀಟ ಬಾಧೆ ಪುನಃಕಂಡು ಬಂದಲ್ಲಿ 2 ವಾರಗಳ ನಂತರ ಮತ್ತೊಮ್ಮೆ ಇದೇ ಕ್ರಮ ಅನುಸರಿಸಬೇಕು. ಫಾಲ್ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ0.50ಮಿ.ಲೀ ಸ್ಟೈನೆಟೋರಮ್ ಅಥವಾ 0.3 ಮಿ.ಲೀ. ಕ್ಲೋರಾಂಟ್ರಿನಿಲಿಪ್ರೋಲ ಬೆರೆಸಿ ಕೈ ಪಂಪಿನಿಂದ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.

ಶೇಂಗಾ ಬೆಳೆಯಲ್ಲಿ ಸುರುಳಿ ಪೂಚಿ ಬಾಧೆಯು ಉತ್ತರ ಕರ್ನಾಟಕದ ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇಳುವರಿಯಲ್ಲಿ ಶೇ.20-80ರಷ್ಟು ಹಾನಿ ಉಂಟಾಗುತ್ತದೆ. ಕೀಟವು ಚಿಗುರೆಲೆಗಳನ್ನು ಕೊರೆದು ಸುರಂಗ ಮಾಡಿ ಒಳಗಿನ ಹರಿತ್ತನ್ನು ತಿನ್ನುತ್ತದೆ. ಅಧಿಕವಾದಾಗ ಪೂರ್ತಿ ಬೆಳೆ ಸುಟ್ಟಂv ೆಕಾಣುವುದು.2 ಮಿ. ಲೀ ಪ್ರೋಫೆನೋಫಾಸ್ 50 ಇ.ಸಿ.ಅಥವಾ 0.075 ಮಿ. ಲೀ.ಪ್ಲೊಬೆಂಡಿಯಾಮೈಡ್ 39.35 ಎಸ್. ಸಿ.ಅಥವಾ 0.12 ಮಿ. ಲೀ.ಸ್ಪೈನೊಸಾಡ್ 45 ಎಸ್.ಸಿ.ಅಥವಾ 1 ಮಿ. ಲೀ. ಮೊನೋಕ್ರೋಟೊಫಾಸ್ 36 ಎಸ್.ಎಲ್.ಪ್ರತಿ ಲೀಟರ್ ನೀರಿಗೆ ಸೇರಿಸಿಸಿಂಪರಣೆ ಮಾಡಿ. ಅರ್ಥಿಕ ನಷ್ಟದರೇಖೆ ಬೆಳೆಯು ಹೂವಾಡುವ ಹಂತದಲ್ಲಿ ಪ್ರತಿಗಿಡಕ್ಕೆ 5 ಹುಳುಗಳು/ ಸುರಂಗಗಳು, ಕಾಯಿಕಟ್ಟುವಹಂತದಲ್ಲಿ ಪ್ರತಿಗಿಡಕ್ಕೆ 10 ಹುಳುಗಳು/ ಸುರಂಗಗಳು ಹಾಗೂಕಾಯಿ ಬಲಿಯುವ ಹಂತದಲ್ಲಿ ಪ್ರತಿಗಿಡಕ್ಕೆ 15 ಹುಳುಗಳು/ಬೊಬ್ಬೆಗಳುಕಂಡು ಬಂದಾಗ ಸಿಂಪರಣೆತೆಗೆದುಕೊಳ್ಳಬೇಕು.

ಶೇಂಗಾ ಬೆಳೆಯ ಎಲೆಚುಕ್ಕೆ ರೋಗದಲ್ಲಿ,ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಳು ಬೆಳೆಯ ಕೆಳಭಾಗದ ಎಲೆಗಳಮೇಲೆ ಮೊದಲು ಕಾಣಿಸಿಕೊಂಡು ರೋಗ ನಂತರ 2 - 3 ಮಿ.ಮೀ. ಗಾತ್ರದ ಕಪ್ಪು ಚುಕ್ಕೆಗಳಾಗಿ ಕಾಣಿಸಿಕೊಳ್ಳುವುವು. ರೋಗ ಲಕ್ಷಣಗಳು ಎಲೆದೇಟು ಹಾಗೂ ಕಾಂಡ ಭಾಗದ ಮೇಲೆ ಸಹ ಕಂಡುಬರುತ್ತವೆ. ತೀವ್ರವಾಗಿ ರೋಗ ಹರಡಿದಾಗ ಎಲೆಗಳು ಹಾಗೂ ದೇಟು ಉದುರಿ ಬೀಳುವವು.ಪ್ರತಿ ಲೀಟರ್ ನೀರಿಗೆ 0.5 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ.ಅಥವಾ 2 ಗ್ರಾಂಕ್ಲೋರೊಥ್ಯಾಲೋನಿಲ್ 75 ಡಬ್ಲೂ.ಪಿ ಅಥವಾ 1 ಮಿ.ಲೀ. ಹೆಕ್ಸಾಕೋನೋಜೋಲ್ 5 ಇ. ಸಿ. ಅಥವಾ 1 ಮಿ.ಲೀ. ಡೈಪೆನ್‌ಕೋನಾಜೋಲ್ 25 ಇ. ಸಿ. ಅಥವಾ 0.5 ಗ್ರಾಂ ಮೈಕ್ಲೊಬುಟಾನಿಲ್ 10 ಡಬ್ಲೂ.ಪಿ.ಅಥವಾ 2 ಗ್ರಾಂಕಾರ್ಬೆಡೈಜಿಮ್ + ಮ್ಯಾಂಕೋಜೆಬ್ 75 ಡಬ್ಲೂ.ಪಿ.ಅಥವಾ 1.5 ಮಿ. ಲೀ.ಟೆಬುಕೋನಾಜೋಲ್ 250 ಇ. ಸಿ. ಅಥವಾ 2.5 ಗ್ರಾಂಜೈನೆಬ್ (68%) + ಹೆಕ್ಸಾಕೋನೋಜೋಲ್ (4%) ಬೆರೆಸಿ ತಯಾರಿಸಿದ ದ್ರಾವಣವನ್ನು ಬೆಳೆಯ 35 ಹಾಗೂ 50 ನೇ ದಿನದ ಅವಧಿಯಲ್ಲಿ ಸಿಂಪರಣೆ ಮಾಡಬೇಕು.

ಸ್ಪೋಡೊಪ್ಟೆರಾಕೀಟದ ಸಮೀಕ್ಷೆಗಾಗಿ ಪ್ರತಿಎಕರೆಗೆಕನಿಷ್ಠ 2 ಮೋಹಕ ಬಲೆಗಳನ್ನು 30 ಅಡಿಗೂ ಹೆಚ್ಚುಅಂತರದಲ್ಲಿ ನೇತು ಹಾಕಬೇಕು.ಪ್ರತಿ 20 ದಿನಕ್ಕೊಮ್ಮೆ ಮೋಹಕ ವಸ್ತು (ಲ್ಯೂರ್) ಗಳನ್ನು ಬದಲಾಯಿಸಬೇಕು ಹಾಗೂ ಬೆಳೆಯಿಂದ 2 ಅಡಿ ಎತ್ತರದಲ್ಲಿರಬೇಕು.ಸ್ಪೋಡೊಪ್ಟೆರಾಕೀಟದ ಮೊಟ್ಟೆಅಥವಾ ಮರಿ ಹುಳುಗಳುಗುಂಪಾಗಿರುವುದರಿಂದ ಇವುಗಳನ್ನು ಶೇಂಗಾ ಹಾಗೂ ಔಡಲ ಬೆಳೆಯಿಂದ ಆಯ್ದು ನಾಶಪಡಿಸಬೇಕು.

ಸ್ಪೋಡೊಪ್ಟೆರಾಎನ್.ಪಿ.ವಿ. 100 ಎಲ್.ಇ. ಪ್ರತಿಎಕರೆಗೆ ಬಳಸುವುದು.ವಿಷಪಾಷಾಣವನ್ನು ಪ್ರತಿಎಕರೆಗೆ 20 ಕಿ. ಗ್ರಾಂ ನಂತೆ ಸಾಯಂಕಾಲದ ಸಮಯ ಸಾಲುಗಳ ಮಧ್ಯೆಎರಚಬೇಕು. ವಿಷಪಾಷಾಣತಯಾರಿಸಲು 2 ಕಿ. ಗ್ರಾಂ ಬೆಲ್ಲ, 250 ಮಿ. ಲೀ.ಮೊನೋಕ್ರೊಟೋಫಾಸ್ 36 ಎಸ್.ಎಲ್. ನೀರಿನೊಂದಿಗೆಕರಗಿಸಿ ನಂತರ 2-3 ಲೀ.ನೀರಿನೊಂದಿಗೆ 20 ಕಿ. ಗ್ರಾಂಅಕ್ಕಿ ಅಥವಾ ಗೋದಿ ತೌಡಿನಲ್ಲಿ ಸರಿಯಾಗಿ ಬೆರೆಸಬೇಕು.ರಸ ಹೀರುವ ಕೀಟಗಳು ಕಂಡು ಬಂದಾಗ ಶೇ.5 ರ ಬೇವಿನ ಬೀಜ ಕಷಾಯವನ್ನು ಸಿಂಪಡಿಸಬೇಕು.

ರೈತ ಬಾಂಧವರು ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ಅಳವಡಿಸಿಕೊಂಡು ಸುಸ್ಥಿರಕೃಷಿಯತ್ತ ಒಲವು ತೋರಬೇಕೆಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande