ವಿಜಯಪುರ, 16 ಜುಲೈ (ಹಿ.ಸ.) :
ಆ್ಯಂಕರ್ : ಕೊಲೆ ಆರೋಪಿಗಳಿಗೆ ವಿಜಯಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 3,50,000 ದಂಡದ ಜೊತೆಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮೃತನಾತ ಜಕರಾಯ ಭೀಮರಾಯ ದಳವಾಯಿ 42 ವರ್ಷ ಈತನು ದಿನಾಂಕ: 22.02.2023 ರಂದು ಸಂಜೆ 5.00 ಗಂಟೆಯ ಸುಮಾರಿಗೆ ಬಸವನಬಾಗೇವಾಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮುಂದೆ ಕಾಣಿಯಾಗಿದ್ದು, ಆತನನ್ನು ಹುಡುಕಿ ಕೊಡುವಂತೆ ದಿನಾಂಕ 27.04.2023 ರಂದು ಪಿರ್ಯಾದಿ ನೀಡಿದ್ದು, ನಂತರ ಮತ್ತೆ ದಿನಾಂಕ: 25.08.2023 ರಂದು ನೀಡಿದ ಪಿರ್ಯಾದಿಯಲ್ಲಿ ಆರೋಪಿತರಾದ ಡೋಂಗ್ರಿಸಾಬ ಸೈಪನಸಾಬ ಬೊಮ್ಮನಹಳ್ಳಿ, ಜಯಶ್ರೀ ಜಕರಾಯ ದಳವಾಯಿ ಅಡುಗೆ ಕೆಲಸಕ್ಕೆ ಹೋದಾಗ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ತನ್ನ ಮಗ ಹೆಂಡತಿಗೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾಗಿ ದಿನಾಂಕ: 23.02.2023 ರಂದು ರಾತ್ರಿ 23.50 ಗಂಟೆಯ ಸುಮಾರಿಗೆ ಕೊಲೆ ಮಾಡಿ. ಶವವನ್ನು ಸುಟ್ಟರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 286/2023. ಕಲಂ: 120(ಬಿ), 302, 201 ಸಹ ಕಲಂ. 34 ಐಪಿಸಿ ಕಲಂ. ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣವನ್ನು ಪೊಲೀಸ್ ಇನ್ಸ್‌ಪೆಕ್ಟರ್ ರಾಯಗೊಂಡ ಎಸ್. ಜಾನರ ಸದರಿ ಪ್ರಕರಣದ ತನಿಖೆ ಕೈಕೊಂಡು, ಮೃತನ ಶವ ಹಾಗೂ ಮೃತನ ಟಿವಿಎಸ್ ಎಕ್ಸ್‌ಎಲ್ ಬೈಕ್‌ನ್ನು ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾಳ ಭಾವಿಯ ಪಕ್ಕದಲ್ಲಿ ಸುಟ್ಟು, ಬೂದಿ ಮತ್ತು ಉಳಿದ ಅವಶೇಷಗಳನ್ನು ಭಾವಿಯಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ ಬಗ್ಗೆ ತನಿಖೆಯಿಂದ ಪತ್ತೆ ಹಚ್ಚಿ ಭಾವಿಯಲ್ಲಿ ಎಸೆದ ಮೃತನ ಪಾನ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್, ವೋಟರ್ ಐಡಿ, ವಾಹನದ ಅವಶೇಷಗಳು ಮತ್ತು ಎಲುಬುಗಳನ್ನು ಸಂಗ್ರಹಿಸಿ. ಪ್ರಕರಣವನ್ನು ಹದ್ದಿ ಆಧಾರದ ಮೇಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ಬಸವನ ಬಾಗೇವಾಡಿ ಗುನ್ನೆ ನಂ : 304/2023. ಕಲಂ: 120(2), 302, 201 ಸಹ ಕಲಂ. 34 ಐಪಿಸಿ ಕಲಂ. ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮೃತನ ಅವಶೇಷ ಎಲುಬುಗಳು ಮೃತನ ತಾಯಿಯ ಡಿಎನ್ಎ ಗೆ ಹೋಲಿಕೆಯಾಗಿದ್ದು, ಭಾವಿಯಲ್ಲಿ ಪತ್ತೆಯಾದ ಮೃತನ ಗುರುತಿನ ಚೀಟಿಗಳು ಹಾಗೂ ವಾಹನದ ಅವಶೇಷಗಳು ಹಾಗೂ ಸಾಕ್ಷಿ ಪುರಾವೆಗಳ ಆಧಾರದಲ್ಲಿ ಆರೋಪಿತರಾದ ಡೋಂಗ್ರಿಸಾಬ ಸೈಪನಸಾಬ ಬೊಮ್ಮನಹಳ್ಳಿ, ಜಯಶ್ರೀ ಜಕರಾಯ ದಳವಾಯಿ ಮಾನ್ಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 1ನೇ ಆರೋಪಿತನಿಗೆ 3,20,000/-ರೂ. ದಂಡ, 2ನೇ ಆರೋಪಿತಳಿಗೆ 30,000/- ರೂಪಾಯಿಗಳ ಒಟ್ಟು ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ಸದರಿ ಪ್ರಕರಣದಲ್ಲಿ ಅಭಿಯೋಗ/ಸರ್ಕಾರದ ಪರವಾಗಿ ವನಿತಾ.ಎಸ್.ಇಟಗಿ ವಾದ ಮಂಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande