ಗಣಿತವು ದೈನಂದಿನ ಜೀವನಕ್ಕೆ ಅತ್ಯುಪಯುಕ್ತ : ಡಾ.ಚನ್ನಪ್ಪ.ಎ
ರಾಯಚೂರು, 16 ಜುಲೈ (ಹಿ.ಸ.) : ಆ್ಯಂಕರ್ : ಗಣಿತದ ಮೂಲ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಗಣಿತದ ಕಲಿಕೆ ಹಾಗೂ ಅಭ್ಯಾಸ ಸುಲಭವಾಗಬಲ್ಲದು, ಗಣಿತವು ದೈನಂದಿನ ಜೀವನಕ್ಕೆ ಅತ್ಯುಪಯುಕ್ತವಾಗಿದ್ದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಚನ್ನಪ್ಪ.ಎ ಅವರು ಹೇಳಿದ್ದಾರೆ. ವಾಲ್ಮೀಕಿ
ಗಣಿತವು ದೈನಂದಿನ ಜೀವನಕ್ಕೆ ಅತ್ಯುಪಯುಕ್ತ : ಡಾ.ಚನ್ನಪ್ಪ.ಎ


ಗಣಿತವು ದೈನಂದಿನ ಜೀವನಕ್ಕೆ ಅತ್ಯುಪಯುಕ್ತ : ಡಾ.ಚನ್ನಪ್ಪ.ಎ


ರಾಯಚೂರು, 16 ಜುಲೈ (ಹಿ.ಸ.) :

ಆ್ಯಂಕರ್ : ಗಣಿತದ ಮೂಲ ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಗಣಿತದ ಕಲಿಕೆ ಹಾಗೂ ಅಭ್ಯಾಸ ಸುಲಭವಾಗಬಲ್ಲದು, ಗಣಿತವು ದೈನಂದಿನ ಜೀವನಕ್ಕೆ ಅತ್ಯುಪಯುಕ್ತವಾಗಿದ್ದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಚನ್ನಪ್ಪ.ಎ ಅವರು ಹೇಳಿದ್ದಾರೆ.

ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಣಿತ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಸಂಪೂರ್ಣ 2025ದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಭಯ ಹೋಗಲಾಡಿಸಿ, ಅವರ ಆತ್ಮ ಬಲವೃದ್ಧಿಗೆ ಗಣಿತ ಪೂರಕವಾಗಿದೆ. ಉನ್ನತ ಪದವಿಗಳು ನಿಮ್ಮ ಜೀವನದ ದಾರಿದೀಪಗಳಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು, ತರಗತಿಗಳಿಗೆ ಹಾಜರಾಗಿ ಪಾಠದ ಸದುಪಯೋಗ ಪಡೆದುಕೊಳ್ಳಬೇಕು, ಗಣಿತ ವಿಷಯಕ್ಕೆ ಬೇಡಿಕೆಯಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅತಿಥಿಗಳಾಗಿ ವಿವಿಯ ಹಣಕಾಸು ಅಧಿಕಾರಿ ಹಾಗೂ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗಣಿತದ ಬಗ್ಗೆ ಜ್ಞಾನವಿದ್ದು, ಸಮಾಜದಲ್ಲಿ ಆರ್ಥಿಕ ಹಾಗೂ ಉದ್ಯೋಗಕ್ಕೆ ಈ ವಿಷಯ ಸಹಾಯಕವಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಗಣಿತ ವಿಷಯಕ್ಕೆ ಹೆಚ್ಚಿನ ಬೇಡಿಕೆಯಿದ್ದು, ನಿಮ್ಮ ಭವಿಷ್ಯ ಉಜ್ವಲವಾಗಲಿ, ಅರ್ಥಪೂರ್ಣವಾಗಿ ಪರೋಪಕಾರಿ ಬದುಕು ನಡೆಸುತ್ತಾ ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅತಿಥಿಗಳಾಗಿ, ಕಲಾನಿಕಾಯದ ಡೀನರಾದ ಪ್ರೊ.ಪಾರ್ವತಿ ಸಿ.ಎಸ್. ಮಾತನಾಡಿ, ಸಂಶೋಧನೆಗೆ ಗಣಿತ ಬಹು ಮುಖ್ಯವಾಗಿ ಸಹಕಾರಿಯಾಗಿದೆ. ಗಣಿತ ಆಸಕ್ತಿದಾಯಕ ವಿಷಯವಾಗಿದ್ದು, ನಿಜ ಜೀವನದಲ್ಲಿ ಶ್ರೇಷ್ಠ ಪಾತ್ರ ವಹಿಸುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಗಣಿತ ತಮ್ಮ ನೆನಪಿನ ಆಳವಾದ ಜ್ಞಾನ ಸಂಪತ್‍ಭರಿತವಾಗಿತ್ತು. ಆದರೆ ಆಧುನಿಕ ದಿನಮಾನಗಳಲ್ಲಿ ಪ್ರತಿಯೊಬ್ಬರು ಲೆಕ್ಕ ಮಾಡಲು ಯಂತ್ರಗಳನ್ನು ಉಪಯೋಗಿಸುತ್ತಿದ್ದಾರೆ ಇದು ವಿಶಾದನೀಯ. ಗಣಿತಶಾಸ್ತ್ರದಲ್ಲಿ ನೆನಪಿನ ಶಕ್ತಿ ಆಳವಾಗಿರಬೇಕು. ಉನ್ನತ ಹುದ್ದೆಗಳು ಸಿಗುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕಾರ್ಯಕ್ರಮದ ಅತಿಥಿಗಳಾಗಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ ಮಾತನಾಡಿ, ಬೀಳ್ಕೊಡುಗೆ ಸಮಾರಂಭವು ಗುರು ಶಿಷ್ಯರ ಸಂಸ್ಕøತಿಯ ಪರಂಪರೆ ತೋರಿಸುತ್ತದೆ. ಗಣಿತವು ಸಾಕಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡುತ್ತದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿ ಇರುವಂತಹ ಉದ್ಯೋಗವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಿ. ಗಣಿತಶಾಸ್ತ್ರದಲ್ಲಿ ಪಾಂಡಿತ್ಯಪಡೆದು ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಗಣಿತ ವಿಭಾಗದ ಸಂಯೋಜಕರು ಹಾಗೂ ಅತಿಥಿ ಉಪನ್ಯಾಸಕರಾದ ಡಾ.ಮಹಾಲಕ್ಷ್ಮೀ ಪ್ರಾಸ್ತಾವಿಕ ನುಡಿದರು. ಡಾ.ಹನುಮಂತ, ಅಶ್ವಿನಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೆ.ರೂಪಶ್ರೀ ಪ್ರಾರ್ಥಿಸಿದರು, ಸೌಮ್ಯಶ್ರೀ ಸ್ವಾಗತಿಸಿದರು. ಸಂಜೀವಕುಮಾರ್ ಮತ್ತು ಉಷ್ಮಿತಾ ನಿರೂಪಿಸಿದರು, ಭುವನೇಶ್ವರಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು, ವೆಂಕಟೇಶ ವಂದಿಸಿದರು. ವಿವಿಧ ವಿಭಾಗದ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande