ಬಳ್ಳಾರಿ, 16 ಜುಲೈ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಸುಂಡಿ ಗ್ರಾಮದ ವ್ಯಾಪ್ತಿಯಲ್ಲಿರುವ ಪಿಕಪ್ ಕಾಲುವೆಯು ಕಳೆದ 20 ವರ್ಷಗಳಿಂದ ದುರುದ್ದೇಶಗಳಿಂದ ಮುಚ್ಚಿದ್ದನ್ನು, ಶಾಸಕ ಬಿ. ನಾಗೇಂದ್ರ ಅವರು ತೆರೆಯಿಸಿ 200 ಎಕರೆ ಭೂ ಪ್ರದೇಶಕ್ಕೆ ನೀರುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪಿಕಪ್ ವ್ಯಾಪ್ತಿಯ ರೈತರು ಶಾಸಕ ಬಿ. ನಾಗೇಂದ್ರ ಅವರನ್ನು ಸಂಪರ್ಕಿಸಿ, ತಮ್ಮ ಅಳಲನ್ನು ತೋಡಿಕೊಂಡಾಗ, ಪೊಲೀಸರು ಮತ್ತು ನೀರಾವರಿ ಅಧಿಕಾರಿಗಳ ಮೂಲಕ ಪಿಕಪ್ ಮುಚ್ಚಲು ಇರುವ ಕಾರಣಗಳನ್ನು ತಿಳಿದು, ವಿನಾಕಾರಣ ದುರುದ್ದೇಶದಿಂದ ಮುಚ್ಚಿರುವ ಪಿಕಪ್ ಅನ್ನು ತಕ್ಷಣವೇ ತೆರೆದು, ರೈತರಿಗೆ ನೆರವಾಗಬೇಕು ಎಂದು ಆದೇಶ ನೀಡಿದರು.
ಶಾಸಕ ಬಿ. ನಾಗೇಂದ್ರ ಅವರ ನಿರ್ದೇಶನ ಮತ್ತು ದಾಖಲೆಗಳಲ್ಲಿ ಚಾಲನೆಯಲ್ಲಿರುವ ಪಿಕಪ್ ಅನ್ನು ತೆರೆಯುವ ಮೂಲಕ ನೀರಾವರಿ ಅಧಿಕಾರಿಗಳು, ರೈತರಿಗೆ ನೆರವಾಗಿದ್ದಾರೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹನುಮಕ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವು, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಣ್ಣ ಪೆದ್ದಯ್ಯ, ಹೊನ್ನೂರು ಸ್ವಾಮಿ, ಇಬ್ರಾಹಿಂ ಸಾಹೇಬ್, ಶೇಷಪ್ಪ, ಹನುಮಪ್ಪ, ಮಾರಣ್ಣ, ಮದ್ರಿಸ್, ಶಾಸಕರ ಆಪ್ತರಾದ ದುರುಗಣ್ಣ, ಆರ್.ಐ. ಅನ್ನಪೂರ್ಣ, ಎಚ್.ಎಲ್.ಸಿ, ಎ.ಇ.ಇ ಸುರೇಶ್, ಪಿ.ಡಿ ಹಳ್ಳಿ ಸಿಪಿಐ ರುದ್ರಪ್ಪ, ಪಿ.ಎಸ್.ಐ ತಿಮ್ಮರೆಡ್ಡಿ ಅವರು ಹಾಗೂ ಅಸುಂಡಿ ಗ್ರಾಮದ ರೈತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್