ಬೆಂಗಳೂರು, 16 ಜುಲೈ (ಹಿ.ಸ.) :
ಆ್ಯಂಕರ್ : ಜೈವಿಕ ಇಂಧನ ಕ್ಷೇತ್ರದಲ್ಲಿ ಸಮಗ್ರ ನೀತಿ ರೂಪಿಸುವ ಗುರಿಯನ್ನು ಹೊಂದಿರುವ ಕರ್ನಾಟಕ ಸರ್ಕಾರ, ಈ ದಿಕ್ಕಿನಲ್ಲಿ ತುರ್ತು ಕ್ರಮ ಕೈಗೊಳ್ಳಲು ಸಜ್ಜಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಅವರು ಇಂದು ನಡೆದ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಜೈವಿಕ ಇಂಧನ ವಲಯದ ಸ್ಥಿತಿ, ಅವಕಾಶಗಳು ಹಾಗೂ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಹೊಸ ನೀತಿಯ ಪ್ರಮುಖ ಉದ್ದೇಶಗಳು:
ಕೃಷಿ ಅವಶೇಷ ಮತ್ತು ತ್ಯಾಜ್ಯ ಬಳಸಿ ಮಾರುಕಟ್ಟೆ ಸಂಪರ್ಕ ಸೃಷ್ಟಿಸುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ಒದಗಿಸುವುದು
ಗ್ರಾಮೀಣ ಭಾಗದಲ್ಲಿ ಹಸಿರು ಉದ್ಯೋಗ ಸೃಷ್ಟಿಸುವುದು
ಸುಸ್ಥಿರ ಇಂಧನ ಬಳಕೆಯನ್ನು ಉತ್ತೇಜಿಸುವುದು
ಇಂಗಾಲದ ಉದುರಿಕೆಯನ್ನು ಕಡಿಮೆ ಮಾಡಿ ಹವಾಮಾನ ಗುರಿಗಳನ್ನು ಸಾಧಿಸುವುದು ಹೊಂದಿದೆ.
ಇಂಧನದ ಭವಿಷ್ಯವು ವರ್ತುಲಮಯ, ವಿಕೇಂದ್ರೀಕೃತ ಮತ್ತು ಎಲ್ಲರನ್ನೂ ಒಳಗೊಂಡಿರುವುದಾಗಿದೆ. ಕರ್ನಾಟಕವು ಈ ಹಾದಿಯಲ್ಲಿ ಮುನ್ನಡೆಯಲು ಸಿದ್ಧವಾಗಿದೆ ಎಂದು ತಿಳಿಸಿದ್ದು
ಮಂಡಳಿಯು ಮುಂದಿನ ತಿಂಗಳುಗಳಲ್ಲಿ ಹೊಸ ಜೈವಿಕ ಇಂಧನ ನೀತಿಯನ್ನು ಪ್ರಕಟಿಸಲಿದೆ. ಈ ನೀತಿ ರಾಜ್ಯವನ್ನು ರೈತ-ಚಾಲಿತ, ಶುದ್ಧ ಇಂಧನ ಪರಿಹಾರಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವ ಗುರಿಯನ್ನು ಹೊಂದಿದೆ ಎಂದು ಖರ್ಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa