ಹಾಸನ, 16 ಜುಲೈ (ಹಿ.ಸ.) :
ಆ್ಯಂಕರ್ : ಹಾಸನ ಜಿಲ್ಲೆಯ ಸಮಾಪನೆಗೊಂಡಿರುವ ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಗೌರಿಕೊಪ್ಪಲು, ಹರಳಿಕಟ್ಟೆ ಸರ್ಕಲ್ ಈ ಸಹಕಾರ ಸಂಘವು 05-02-2013 ರ ರೀತ್ಯಾ ನೋಂದಣಿಗೊಂಡು, ಸಂಘದ ಬೈಲಾ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದರಿಂದ, ಪ್ರಸ್ತುತ ಸಮಾಪನೆಯಲ್ಲಿರುತ್ತದೆ. ಸದರಿ ಸಮಾಪನೆಗೊಂಡ ಸಹಕಾರ ಸಂಘದ ನೊಂದಣಿಯನ್ನು ರದ್ದುಪಡಿಸಲು ಕ್ರಮವಿಡಲಾಗುತ್ತಿದ್ದು, ಸಮಾಪನೆಯಲ್ಲಿರುವ ಸಂಘದ ಯಾವುದೇ ದಾಖಲಾತಿಗಳು ಲಭ್ಯವಿಲ್ಲದ ಕಾರಣ, ಸಂಘವನ್ನು ರದ್ದುಪಡಿಸುವ ಬಗ್ಗೆ ಸದಸ್ಯರು ಅಥವಾ ಸಾರ್ವಜನಿಕರು ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಲ್ಲಿಸಲು ಅಥವಾ ಸಂಘಗಳ ಷೇರುದಾರರೆಂದು ಸಾಭೀತುಪಡಿಸಿಕೊಳ್ಳಲು ದಾಖಲಾತಿಗಳೊಂದಿಗೆ ಪತ್ರಿಕೆಯಲ್ಲಿ ಪ್ರಕಟಣೆಗೊಂಡ 15 ದಿನಗಳೊಳಗಾಗಿ ಸಮಾಪನಾಧಿಕಾರಿ ಹಾಗೂ ಸಹಕಾರ ಅಭಿವೃದ್ದಿ ಅಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ದಿ ಪ್ಲಾಂರ‍್ಸ್ ಸಹಕಾರ ಸಂಘದ ಕಟ್ಟಡ, ಕರೀಗೌಡ, ಕಾಲೋನಿ, ಬಿ.ಎಂ. ರಸ್ತೆ, ಹಾಸನ ರವರನ್ನು ಖುದ್ದು ಸಂಪರ್ಕಿಸಲು ತಿಳಿಸಲಾಗಿದೆ.
ಈ ಪತ್ರಿಕಾ ಪ್ರಕಟಣೆಯ ಮೇರೆಗೆ ಯಾವುದೇ ಅಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ 15 ದಿನಗಳ ನಂತರ ಸಮಾಪನೆಗೊಂಡಿರುವ ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹಾಸನ ಸಂಘದ ಸಮಾಪನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನೊಂದಣಿ ರದ್ದತಿಗೆ ನಿರ್ಣಯ ಕೈಗೊಳ್ಳಲಾಗುವುದೆಂದು ಸಹಕಾರ ಸಂಘಗಳ ಉಪ ನಿಬಂಧರಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa