ವಿಜಯಪುರ, 16 ಜುಲೈ (ಹಿ.ಸ.) :
ಆ್ಯಂಕರ್ : ವಿಜಯಪುರ ಉತ್ಸವ 2025 4ನೇ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಶ್ಯಾಮಿಯಾನ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ, ಡೆಕೋರೆಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ ಹಿರೇಮಠ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 18, 19 ಹಾಗೂ 20ರ ವರೆಗೂ ಮಹಾ ಅಧಿವೇಶನ ವಿಜಯಪುರ ನಗರದ ರಾಮಚಂದ್ರ ಆಳಕುಂಟೆ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಈ ಅಧಿವೇಶನದಲ್ಲಿ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ ಮಾಡಲಾಗುವುದು. ಕಾರ್ಯವನ್ನು ಸಚಿವ ಎಂ ಬಿ ಪಾಟೀಲ ಉದ್ಘಾಟನೆ ಮಾಡಲಿದ್ದು,, ಶಾಸಕರು, ಗಣ್ಯರು ಆಗಮಿಸುತ್ತಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande