ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅಗತ್ಯ : ಎಂ. ಎ. ಶಕೀಬ್
ಬಳ್ಳಾರಿ, 16 ಜುಲೈ (ಹಿ.ಸ.) : ಆ್ಯಂಕರ್ : ಜೀವಗಳನ್ನು ಉಳಿಸಲು, ಅನಾರೋಗ್ಯವನ್ನು ತಡೆಗಟ್ಟಲು ಹಾಗೂ ವೃತ್ತಿಪರ ವೈದ್ಯಕೀಯ ಸಹಾಯ ಉತ್ತೇಜಿಸಲು ಪ್ರಥಮ ಚಿಕಿತ್ಸೆ ನಿರ್ಣಾಯಕ ಎಂದು ಭಾರತೀಯ ರೆಡ್ ಕ್ರಾಸ್ ನ ಜಿಲ್ಲಾ ಶಾಖೆಯ ಎಂ.ಎ. ಶಕೀಬ್ ಅವರು ತಿಳಿಸಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿ
ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅಗತ್ಯ: ಎಂ ಎ ಶಕೀಬ್


ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅಗತ್ಯ: ಎಂ ಎ ಶಕೀಬ್


ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸೆ ಅಗತ್ಯ: ಎಂ ಎ ಶಕೀಬ್


ಬಳ್ಳಾರಿ, 16 ಜುಲೈ (ಹಿ.ಸ.) :

ಆ್ಯಂಕರ್ : ಜೀವಗಳನ್ನು ಉಳಿಸಲು, ಅನಾರೋಗ್ಯವನ್ನು ತಡೆಗಟ್ಟಲು ಹಾಗೂ ವೃತ್ತಿಪರ ವೈದ್ಯಕೀಯ ಸಹಾಯ ಉತ್ತೇಜಿಸಲು ಪ್ರಥಮ ಚಿಕಿತ್ಸೆ ನಿರ್ಣಾಯಕ ಎಂದು ಭಾರತೀಯ ರೆಡ್ ಕ್ರಾಸ್ ನ ಜಿಲ್ಲಾ ಶಾಖೆಯ ಎಂ.ಎ. ಶಕೀಬ್ ಅವರು ತಿಳಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗÀ ಇವರ ಜಂಟಿ ಆಶ್ರಯದಲ್ಲಿ ನಡೆದ `ಪ್ರಥಮ ಚಿಕಿತ್ಸೆ’ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಥಮ ಚಿಕಿತ್ಸೆಯು ಆರೋಗ್ಯ ಕಾಪಾಡುವಲ್ಲಿ ಬಹಳ ಪ್ರಮುಖವಾಗಿದೆ. ಆಕಸ್ಮಿಕವಾಗಿ ಕಾಯಿಲೆಗಳು ಅಥವಾ ಗಾಯಗಳಿಗೆ ತಕ್ಷಣದ ಸಹಾಯದ ಮಹತ್ವ ತಿಳಿಯಬೇಕು. ಇದರಿಂದ ತುರ್ತು ಪರಿಸ್ಥಿತಿಯನ್ನು ಹತೋಟಿಗೆ ತರಬಹುದು ಎಂದು ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿಗಳಾದ ಪ್ರೊ. ಎಂ ಮುನಿರಾಜು ಅವರು, ನಿರ್ದಿಷ್ಟ ಪರಿಸ್ಥಿತಿಯನ್ನು ಆಧರಸಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆಯ ಜ್ಞಾನ ಹೊಂದಿರಬೇಕು ಎಂದರು.

ವಿವಿಯ ಕುಲಸಚಿವರಾದ ನಾಗರಾಜು.ಸಿ ಅವರು, ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆಯ ವಿವಿಧ ಆಯಾಮಗಳನ್ನು ಕಲಿತುಕೊಂಡು ಬೇರೆಯವರಿಗೂ ಕಲಿಸಬೇಕು. ಪ್ರಥಮ ಚಿಕಿತ್ಸೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಡಾ. ಶಶಿಕಾಂತ ಎಚ್. ಮಜಗಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande