ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯಡಿ ಅರ್ಜಿ ಆಹ್ವಾನ
ಗದಗ, 16 ಜುಲೈ (ಹಿ.ಸ.) : ಆ್ಯಂಕರ್ : ಮೀನುಗಾರಿಕಾ ಇಲಾಖೆಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ 2024/25 ನೇ ಸಾಲಿನ ಮತ್ತು ಹಿಂದಿನ ಸಾಲಿನಲ್ಲಿ ಅನುಷ್ಟಾನವಾಗದೇ ಬಾಕಿ ಉಳಿದ ಗುರಿಗಳ ಫಲಾನುಭವಿ ಆಧರಿತ ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಹೊಸದಾಗಿ ಮೀನುಮರಿ ಪ
ಪೋಟೋ


ಗದಗ, 16 ಜುಲೈ (ಹಿ.ಸ.) :

ಆ್ಯಂಕರ್ : ಮೀನುಗಾರಿಕಾ ಇಲಾಖೆಯಿಂದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆಯ 2024/25 ನೇ ಸಾಲಿನ ಮತ್ತು ಹಿಂದಿನ ಸಾಲಿನಲ್ಲಿ ಅನುಷ್ಟಾನವಾಗದೇ ಬಾಕಿ ಉಳಿದ ಗುರಿಗಳ ಫಲಾನುಭವಿ ಆಧರಿತ ಘಟಕಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಹೊಸದಾಗಿ ಮೀನುಮರಿ ಪಾಲಾನಾ ಕೊಳಗಳ ನಿರ್ಮಾಣ ಮೀನು ಕೃಷಿ ಕೊಳ ನಿರ್ಮಾಣ , ಮೀನು ಮಾರಟಕ್ಕೆ ತ್ರಿ ವೀಲರ್ ಮತ್ತು ಐಸ್ ಬಾಕ್ಸ್ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯ ಮಾರ್ಗಸೂಚಿಯಂತೆ ಮತ್ತು ಕೇಂದ್ರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಂತೆ ಅನುಷ್ಠಾನ ಮಾಡಲಾಗುವುದು. ಅರ್ಹ ಆಸಕ್ತ, ಫಲಾನುಭವಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಮೀನುಗಾರಿಕಾ ಸಹಾಯಕ ನಿರ್ದೇಶಕರು ಗದಗ ಮತ್ತು ಮುಂಡರಗಿ ಕಛೇರಿಗೆ 2025 ರ ಅಗಷ್ಟ 5 ರೊಳಗೆ ಅರ್ಜಿ ಸಲ್ಲಿಸಬೇಕು

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande