ಮುಂಬಯಿ, 15 ಜುಲೈ (ಹಿ.ಸ.) :
ಆ್ಯಂಕರ್ : ಬಹುನಿರೀಕ್ಷಿತ ‘ಡಾನ್-3’ ಚಿತ್ರದಿಂದ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದ ನಟ ವಿಕ್ರಾಂತ್ ಮ್ಯಾಸ್ಸಿ ಸಿನಿಮಾವನ್ನು ತೊರೆದಿದ್ದಾರೆ. ಸ್ಕ್ರಿಪ್ಟ್ ಓದಿದ ನಂತರ ಪಾತ್ರದಲ್ಲಿ ಆಳ ಮತ್ತು ಪ್ರಭಾವದ ಕೊರತೆ ಅನುಭವಿಸಿದ ಅವರು, ಬದಲಾವಣೆಗಳನ್ನು ಬೇಡಿಕೆಯಿಟ್ಟರೂ ಅಸಾಧ್ಯವಾದ ಹಿನ್ನೆಲೆಯಲ್ಲಿ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಈ ಹಿಂದೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಆಯ್ಕೆಯಾಗಿದ್ದರೂ, ಗರ್ಭಧಾರಣೆಯ ಹಿನ್ನೆಲೆಯಲ್ಲಿ ಅವರು ಕೂಡ ಚಿತ್ರದಿಂದ ಹೊರ ಬಂದಿದ್ದರು. ಇದೀಗ ನಾಯಕಿಯಾಗಿ ಕೃತಿ ಸನೋನ್ ರಣವೀರ್ ಸಿಂಗ್ ಅವರೊಂದಿಗೆ ಜತೆಯಾಗಲಿದ್ದಾರೆ.
ವಿಕ್ರಾಂತ್ ಮ್ಯಾಸ್ಸಿ ನಿರ್ಗಮನದ ಬಳಿಕ, ಖಳನಾಯಕನ ಪಾತ್ರಕ್ಕೆ ಆದಿತ್ಯ ರಾಯ್ ಕಪೂರ್ ಮತ್ತು ವಿಜಯ್ ದೇವರಕೊಂಡ ಎಂಬವರು ಪರಿಗಣನೆಯಲ್ಲಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಚಿತ್ರತಂಡ ಈ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa