ಸಮಾಜದ ದುರಾದೃಷ್ಟಗಳು ಕಾದಂಬರಿಗಳಲ್ಲಿ ಬಿಂಬಿತವಾಗಿವೆ : ಈಶ್ವರ ಹತ್ತಿ
ಕೊಪ್ಪಳ, 14 ಜುಲೈ (ಹಿ.ಸ.) : ಆ್ಯಂಕರ್ : ಸಮಾಜದ ದುರಾದೃಷ್ಟಗಳು, ಒರೆಕೋರೆಗಳು ಕಾದಂಬರಿಗಳಲ್ಲಿ ಪಾತ್ರಗಳ ಮೂಲಕ ಬಿಂಬಿಸಲಾಗಿದೆ ಎಂದು ಹಿರಿಯ ಸಾಹಿತಿ ಈಶ್ವರ ಹತ್ತಿ ಅವರು ಹೇಳಿದ್ದಾರೆ. ಅವರು ಶಕ್ತಿ ಶಾರದ ಮೇಳ ಮತ್ತು ಬೆರಗು ಪ್ರಕಾಶನ, ಭಾಗ್ಯನಗರದ ವತಿಯಿಂದ ನಡೆದ56ನೇ ‘ಚಿಂತನ-ಮಂಥನ’ ಕೂಟ
ಸಮಾಜದ ದುರಾದೃಷ್ಟಗಳು ಕಾದಂಬರಿಗಳಲ್ಲಿ ಬಿಂಬಿತವಾಗಿವೆ; ಈಶ್ವರ ಹತ್ತಿ


ಸಮಾಜದ ದುರಾದೃಷ್ಟಗಳು ಕಾದಂಬರಿಗಳಲ್ಲಿ ಬಿಂಬಿತವಾಗಿವೆ; ಈಶ್ವರ ಹತ್ತಿ


ಕೊಪ್ಪಳ, 14 ಜುಲೈ (ಹಿ.ಸ.) :

ಆ್ಯಂಕರ್ : ಸಮಾಜದ ದುರಾದೃಷ್ಟಗಳು, ಒರೆಕೋರೆಗಳು ಕಾದಂಬರಿಗಳಲ್ಲಿ ಪಾತ್ರಗಳ ಮೂಲಕ ಬಿಂಬಿಸಲಾಗಿದೆ ಎಂದು ಹಿರಿಯ ಸಾಹಿತಿ ಈಶ್ವರ ಹತ್ತಿ ಅವರು ಹೇಳಿದ್ದಾರೆ.

ಅವರು ಶಕ್ತಿ ಶಾರದ ಮೇಳ ಮತ್ತು ಬೆರಗು ಪ್ರಕಾಶನ, ಭಾಗ್ಯನಗರದ ವತಿಯಿಂದ ನಡೆದ56ನೇ ‘ಚಿಂತನ-ಮಂಥನ’ ಕೂಟದಲ್ಲಿ ಮೌನೇಶ ನವಲಹಳ್ಳಿಯವರ ‘ನೀಲಿಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಮಾನವಿಯತೆ ಇಲ್ಲದಂತಹ ವಾತವರಣ ನಿರ್ಮಾಣವಾಗಿದೆ.ಅಂತಹ ಸನ್ನಿವೇಶಗಳನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಇಂದು ಮನುಷ್ಯ ಸಂಬಂಧಗಳು ಹೇಗೆ ಕಲುಷಿತಗೊಂಡಿವೆ ಎಂಬುದು ಸಹ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಮೌನೇಶ ನವಲಹಳ್ಳಿ ಹಾಗೂ ಪ್ರಕಾಶಕಟಿ.ಎಸ್‍ಗೊರವರ ಇವರನ್ನು ಸನ್ಮಾನಿಸಲಾಯಿತು.

ಜೊತೆಗೆ ಸುಮಾರು 32 ವರ್ಷಗಳ ಕಾಲ ಪ್ರಾಧ್ಯಾಪಕ ಸೇವೆಯಜೊತೆಗೆಕನ್ನಡ ಸಾಹಿತ್ಯದಲ್ಲಿ ಹಲವಾರು ಕೃತಿಗಳ ಮೂಲಕ ಸೇವೆ ಸಲ್ಲಿಸಿದ ಡಾ.ಬಸವರಾಜ ಪೂಜಾರವರನ್ನು ಶಕ್ತಿ ಶಾರದ ಮೇಳದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande