2028ರಲ್ಲಿಯೂ ಕಾಂಗ್ರೆಸ್‌ ಸರ್ಕಾರಕ್ಕೆ ಆಶೀರ್ವದಿಸಿ : ಡಿ.ಕೆ. ಶಿವಕುಮಾರ್
ವಿಜಯಪುರ, 14 ಜುಲೈ (ಹಿ.ಸ.) : ಆ್ಯಂಕರ್ : ನಿಂಬೆಗಿಂತ ಹುಳಿಯಿಲ್ಲ. ದುಂಬಿಗಿಂತ ಕಪ್ಪು ಬಣ್ಣ ಇಲ್ಲ. ಈಶ್ವರನಿಗಿಂತ ದೇವರಿಲ್ಲ, ನಂಬಿಕೆಗಿಂತ ಶ್ರೇಷ್ಠವಾದ ಗುಣವಿಲ್ಲ ಎಂದು ನಂಬುವವರು ನಾವು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ 4,555 ಕೋಟಿ ರೂ
ಡಿಸಿಎಂ


ವಿಜಯಪುರ, 14 ಜುಲೈ (ಹಿ.ಸ.) :

ಆ್ಯಂಕರ್ : ನಿಂಬೆಗಿಂತ ಹುಳಿಯಿಲ್ಲ. ದುಂಬಿಗಿಂತ ಕಪ್ಪು ಬಣ್ಣ ಇಲ್ಲ. ಈಶ್ವರನಿಗಿಂತ ದೇವರಿಲ್ಲ, ನಂಬಿಕೆಗಿಂತ ಶ್ರೇಷ್ಠವಾದ ಗುಣವಿಲ್ಲ ಎಂದು ನಂಬುವವರು ನಾವು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ 4,555 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರದ ಜನರ ಬದುಕು ಹಸನುಗೊಳಿಸುವ ಸಲುವಾಗಿ ವಿಶೇಷ ಯೋಜನೆಗಳಿಗಾಗಿ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರು ಕೇಳಿದ್ದರು. ನಾವು 4,555 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳಿಗೆ ಅನುದಾನವನ್ನು ಒದಗಿಸಿದ್ದೇವೆ. ಇಂಡಿ ತಾಲೂಕಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಮೆಗಾ ಮಾರ್ಕೆಟ್‌, ಬ್ರಿಡ್ಜ್‌ ಕಂ ಬ್ಯಾರೇಜ್‌, ವಸತಿ ನಿಲಯ ಸೇರಿದಂತೆ ನಾನಾ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ನೀರಾವರಿ ಯೋಜನೆಗಳಿಂದ 93 ಸಾವಿರ ಎಕರೆ ಭೂಮಿಗೆ ಅನುಕೂಲವಾಗಲಿದೆ. ಇಂಡಿ ಜನರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಿದೆ ಎಂದರು.

ರಾಜ್ಯದಲ್ಲಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಬೆಲೆಯೇರಿಕೆ ಬಿಸಿ ತಗ್ಗಿಸಲು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರ ಜೀವನ ಬದಲಾವಣೆ ಮಾಡಿವೆ. ಇಂದು ಶಕ್ತಿ ಯೋಜನೆಯಡಿ 500ನೇ ಕೋಟಿ ಟಿಕೆಟ್ ಅನ್ನು ವಿತರಿಸಿದ್ದೇವೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. 2028ರಲ್ಲಿಯೂ ಕಾಂಗ್ರೆಸ್‌ ಸರ್ಕಾರಕ್ಕೆ ಆಶೀರ್ವದಿಸಿ, ಅಭಿವೃದ್ಧಿಗೆ ಕೈಜೋಡಿಸಿ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande