ಬೆಂಗಳೂರು, 14 ಜುಲೈ (ಹಿ.ಸ.) :
ಆ್ಯಂಕರ್ : ದಕ್ಷಿಣ ರೈಲ್ವೆ ಇಲಾಖೆಯು ರೈಲುಗಳ ವೇಳಾಪಟ್ಟಿಯಲ್ಲಿ ಕೆಲವು ಪರಿಷ್ಕರಣೆಗಳನ್ನು ಮಾಡಿದ್ದು, ಸೆಪ್ಟೆಂಬರ್ 2025ರಿಂದ ಬದಲಾವಣೆಗಳು ಜಾರಿಗೊಳ್ಳಲಿವೆ.
ಪುದುಚೇರಿ - ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11006):
ಈ ರೈಲು ಈಗ ಕಟ್ಪಾಡಿ ಜಂಕ್ಷನ್‌ಗೆ ಬೆಳಗಿನ 01:20ಕ್ಕೆ ಆಗಮಿಸಿ, 01:40ಕ್ಕೆ ನಿರ್ಗಮಿಸುತ್ತಿತ್ತು. ಆದರೆ ಸೆಪ್ಟೆಂಬರ್ 9, 2025ರಿಂದ ಆರಂಭವಾಗುವ ಪ್ರಯಾಣದಿಂದ, ಇದು 15 ನಿಮಿಷ ಮೊದಲೇ ಆಗಮಿಸಿ, ಹೊಸ ಸಮಯದಂತೆ 01:05ಕ್ಕೆ ಬಂದು 01:25ಕ್ಕೆ ತೆರಳಲಿದೆ.
ಬೆಂಗಳೂರು - ಕಾಕಿನಾಡ ಟೌನ್ ಶೇಷಾದ್ರಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17209):
ಈ ರೈಲು ಜೋಲಾರ್‌ಪೇಟೆ ಜಂಕ್ಷನ್‌ಗೆ ಪ್ರಸ್ತುತ 14:03ಕ್ಕೆ ಬಂದು 14:05ಕ್ಕೆ ಹೊರಡುತ್ತಿತ್ತು. ಸೆಪ್ಟೆಂಬರ್ 10, 2025ರಿಂದ ಆರಂಭವಾಗುವ ಪ್ರಯಾಣದಿಂದ ಇದು 14:00ಕ್ಕೆ ಬಂದು, 14:05ಕ್ಕೆ ಹೊರಡಲಿದೆ.
ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಈ ಪರಿಷ್ಕೃತ ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಪ್ರಕಟಣೆಯಲ್ಲಿ ವಿನಂತಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa