ವಿಜಯಪುರ, 14 ಜುಲೈ (ಹಿ.ಸ.) :
ಆ್ಯಂಕರ್ : ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಭ್ರಷ್ಟಾಚಾರ ಕಾಣುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಟನಲ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು. ಆದರೆ, ನಾನು ಇನ್ನು ಟೆಂಡರ್ ಕರೆದಿಲ್ಲ. ಅದೇಗೆ ಭ್ರಷ್ಟಾಚಾರ ನಡೆಯುತ್ತದೆ ಎಂದು ಪ್ರಶ್ನಿಸಿದರು.
ನಾವು ಟೆಕ್ನಿಕಲ್‌ಗಳ ಸಲಹೆ ಮೇರೆಗೆ ಟನಲ್ ನಿರ್ಮಾಣ ಮಾಡುತ್ತೇವೆ. ಅದಕ್ಕೂ ಮೊದಲು ತೇಜಸ್ವಿ ಸೂರ್ಯ ಹೇಳೋದಕ್ಕೆ ಅವರೇನೂ ಟೆಕ್ನಿಕಲ್ ಆದವರಾ ಎಂದು ಲೇವಡಿ ಮಾಡಿದರು.
ಮತ್ತೇ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು. ನನಗೆ ಸೇತುವೆ ನಿರ್ಮಾಣದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಬರೀ ಇನ್ವಿಟೇಸನ್‌ನಲ್ಲಿ ಮಾತ್ರ ಹೆಸರು ಹಾಕಿದ್ದಾರೆ. ಆದರೆ, ಆಹ್ವಾನ ನೀಡಿಲ್ಲ. ಅದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande