ತಮಿಳುನಾಡಿನಲ್ಲಿ‌ ಸರಕು ರೈಲಿಗೆ ಬೆಂಕಿ- ಕೆಲ ರೈಲುಗಳ ಸಂಚಾರ ರದ್ದು
ಬೆಂಗಳೂರು, 13 ಜುಲೈ (ಹಿ.ಸ.) : ಆ್ಯಂಕರ್ : ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ತಿರುವಳ್ಳೂರು ಬಳಿ ಸಂಭವಿಸಿದ ಸರಕು ರೈಲು ಬೆಂಕಿ ಅಪಘಾತದ ಕಾರಣ ಸುರಕ್ಷತಾ ಮುನ್ನೆಚ್ಚರಿಕೆಯಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಬೆಂಕಿಯನ್ನು ನಂದಿಸಲು ಎಲ್ಲಾ ಪ್ರಯತ್ನಗಳನ್ನು ನಡೆದಿವೆ, ಘಟನೆ ಹಿನ್ನೆಲ
ತಮಿಳುನಾಡಿನಲ್ಲಿ‌ ಸರಕು ರೈಲಿಗೆ ಬೆಂಕಿ- ಕೆಲ ರೈಲುಗಳ ಸಂಚಾರ ರದ್ದು


ಬೆಂಗಳೂರು, 13 ಜುಲೈ (ಹಿ.ಸ.) :

ಆ್ಯಂಕರ್ : ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ತಿರುವಳ್ಳೂರು ಬಳಿ ಸಂಭವಿಸಿದ ಸರಕು ರೈಲು ಬೆಂಕಿ ಅಪಘಾತದ ಕಾರಣ ಸುರಕ್ಷತಾ ಮುನ್ನೆಚ್ಚರಿಕೆಯಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ಬೆಂಕಿಯನ್ನು ನಂದಿಸಲು ಎಲ್ಲಾ ಪ್ರಯತ್ನಗಳನ್ನು ನಡೆದಿವೆ, ಘಟನೆ ಹಿನ್ನೆಲೆಯಲ್ಲಿ ನೈಋತ್ಯ ರೇಲ್ವೆ ಇಲಾಖೆ ಬೆಂಗಳೂರು ವಿಭಾಗದಿಂದ ಸಂಚರಿಸುವ ಕೆಲ ರೈಲುಗಳ ಸಂಚಾರ ರದ್ದುಗೊಳಿಸಿದೆ

ರೈಲು ಸಂಖ್ಯೆ 20608 ಮೈಸೂರು - ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್

ರೈಲು ಸಂಖ್ಯೆ. 12008 ಮೈಸೂರು -ಎಂಜಿಆರ್ ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್

ರೈಲು ಸಂಖ್ಯೆ. 12640 KSR ಬೆಂಗಳೂರು - ಎಂಜಿಆರ್ ಚೆನ್ನೈ ಬೃಂದಾವನ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ. ಎನ್. ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande